ಮೋದಿ ಹುಟ್ಟುಹಬ್ಬಕ್ಕೆ ಚೆಟ್ಟಳ್ಳಿಯಲ್ಲಿ ಸಂಭ್ರಮ: ಕೇಕ್ ಕತ್ತರಿಸಿ ಶುಭಾಶಯ
admincoorgdaily

ಚೆಟ್ಟಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಚೆಟ್ಟಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಶ್ರೀ ವೀರಾಂಜನೇಯ ಯುವಕ ಸಂಘದ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಚೆಟ್ಟಳ್ಳಿಯ ವಿಶ್ವಗುರು ಪ್ರಧಾನಿ ಶ್ರೀ ಮೋದಿ ರೈತ ಸಹಕಾರ ಭವನದಲ್ಲಿ ಕೇಕ್ ಕತ್ತರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಸಲ್ಲಿಸಲಾಯಿತು.
ಬಿಜೆಪಿ ಕಾರ್ಯಕರ್ತರು ಹಾಗೂ ಯುವಕ ಸಂಘದ ಸದಸ್ಯರು ಒಟ್ಟಾಗಿ ಸೇರಿ ಹುಟ್ಟುಹಬ್ಬ ಆಚರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಅಭಿವೃದ್ಧಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮವಾರಪೇಟೆ ಬಿಜೆಪಿ ಮಂಡಲ ವಕ್ತಾರ ಹಾಗೂ ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದರು. ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆ ಗಳನ್ನು ಜಾರಿಗೊಳಿಸುವ ಮೂಲಕ ವಿಶ್ವಮಟ್ಟದಲ್ಲಿ ಭಾರತದ ಗಮನ ಸೆಳೆದಿದ್ದಾರೆ. ಅವರ ನಾಯಕತ್ವ ಹಾಗೂ ಕಾರ್ಯ ವೈಖರಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚೆಟ್ಟಳ್ಳಿ ಬಿಜೆಪಿ ವಾರ್ಡ್ ಅಧ್ಯಕ್ಷ ಪುತ್ತರಿರ ಶಿವು ನಂಜಪ್ಪ, ಈರಳೆ-ವಳಮುಡಿ ವಾರ್ಡ್ ಅಧ್ಯಕ್ಷ ಚೋಳಪಂಡ ಗಣಪತಿ, ಪೊನ್ನತಮೊಟ್ಟೆ ವಾರ್ಡ್ ಅಧ್ಯಕ್ಷ ಮಾಯಾಕೃಷ್ಣ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಟ್ಟೀರ ವೇಣುಗೋಪಾಲ, ಚೆಟ್ಟಳ್ಳಿ ಬಿಜೆಪಿ ಯುವ ಘಟಕದ ಅಧ್ಯಕ್ಷ ಮಿಥುನ್, ವೀರಾಂಜನೇಯ ಯುವಕ ಸಂಘದ ಅಧ್ಯಕ್ಷ ಸುನಿಲ್, ಖಜಾಂಜಿ ರೀನಾ,
ಸದಸ್ಯರಾದ ಜ್ಯೋತಿಶ್, ವರುಣ್, ಭರತ್, ಗಿರೀಶ್, ತಮ್ಮು,ಗೋಪಾಲ್, ರಾಜೇಶ್ ಹೆಚ್.ಎಸ್, ರಮ್ಯ, ಲೀಲಾವತಿ, ಮಂಜುನಾಥ್, ರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.