Kodagu

ಟಿ.ಶೆಟ್ಟಿಗೇರಿಯಲ್ಲಿ ಬಿಜೆಪಿ ತೊರೆದು 35ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ

admincoorgdaily

ಟಿ.ಶೆಟ್ಟಿಗೇರಿಯಲ್ಲಿ ಬಿಜೆಪಿ ತೊರೆದು 35ಕ್ಕೂ  ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ
ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಭಾಗದ 35ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರ ಕಾರ್ಯವೈಖರಿಯನ್ನು ಮೆಚ್ಚಿ, ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಶಾಸಕರ ನಿರಂತರ ಅಭಿವೃದ್ಧಿ ಹಾಗೂ ಜನಪರ ಚಿಂತನೆಯಿಂದ ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳು ನಡೆಯುತ್ತಿರುವುದನ್ನು ಗಮನಿಸಿ, ಅವರಿಗೆ ಮತ್ತಷ್ಟು ಬಲ ನೀಡಲು ಕಾಂಗ್ರೆಸ್ ಸೇರುತ್ತಿರುವುದಾಗಿ ಬಿಜೆಪಿ ತೊರೆದ ಪ್ರಮುಖರು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರು ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳ ಅಹವಾಲನ್ನು ಶಾಸಕರಿಗೆ ಸಲ್ಲಿಸಿದರು. ಎಲ್ಲರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಆದ್ಯತೆ ಮೇರೆಗೆ ಎಲ್ಲಾ ಮನವಿಗಳನ್ನು ಪರಿಗಣಿಸಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ತಿತೀರ ಪ್ರಭು, ತಾಲೂಕು ಬಗರ್ ಹುಕುಂ ಅಧ್ಯಕ್ಷ ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ಮಾಜಿ ಜಿ.ಪಂ. ಸದಸ್ಯ ಕೆ.ಎಂ. ಬಾಲಕೃಷ್ಣ, ಡಿಸಿಸಿ ಸದಸ್ಯರಾದ ಚೊಟ್ಟೆಯಂಡಮಾಡ ವಿಶು, ಪೆಮ್ಮಂಡ ರಾಜ, ಮುಕಟೀರ ಸಂದೀಪ್, ಪಕ್ಷದ ಹಿರಿಯ ಮುಖಂಡರಾದ ತಿತೀರ ಮಂದಣ್ಣ, ಅಪ್ಪಚಂಗಡ ಮೋಟಯ್ಯ, ಅಲೆಮಾಡ ಸೋಮಣ್ಣ, ಚೊಟ್ಟೆಯಂಡಮಾಡ ಉದಯ, ಪಾಲ್ವಿನ್ ಪೂಣಚ್ಚ, ವಿಶ್ವನಾಥ್, ಮಾಣೀರ ವಿಜಯ ನಂಜಪ್ಪ, ಕಟ್ಟೇರ ವಿಶ್ವನಾಥ್, ಪ್ರವೀಣ್ ಪೊನ್ನಪ್ಪ, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.