Kodagu

ಕಷ್ಟದಲ್ಲಿರುವ ಅನ್ನದಾತನ ರಕ್ಷಣೆಗೆ ನಿಂತ ಸಂಸದರು: ಹರಾಜು ಪ್ರಕರಣಕ್ಕೆ ಬ್ರೇಕ್

admincoorgdaily

ಕಷ್ಟದಲ್ಲಿರುವ ಅನ್ನದಾತನ ರಕ್ಷಣೆಗೆ ನಿಂತ ಸಂಸದರು: ಹರಾಜು ಪ್ರಕರಣಕ್ಕೆ ಬ್ರೇಕ್
ಪೊನ್ನಂಪೇಟೆ:ಬೀಳೂರಿನ ರೈತ ಕಾಂಡೇರ ಸುರೇಶ್ ಅವರ ಮನೆಗೆ ಪೊನ್ನಂಪೇಟೆ ಕೆನರಾ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಬೀಗ ಜಡಿದು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಸಂಸದರು ತುರ್ತು ಮಧ್ಯಪ್ರವೇಶ ಮಾಡಿದ್ದಾರೆ.

37.50 ಲಕ್ಷ ಅಸಲು ಸಾಲಕ್ಕೆ 1.43 ಕೋಟಿ ವಸೂಲಾತಿ ಹೆಸರಿನಲ್ಲಿ, ಎಕರೆಗೆ 50 ಲಕ್ಷ ಬೆಲೆ ಬಾಳುವ 11 ಎಕರೆ ಕಾಫಿ ತೋಟವನ್ನು ಕೇವಲ 12 ಲಕ್ಷಕ್ಕೆ ಹರಾಜು ಹಾಕಿರುವುದು ರೈತನಿಗೆ ಮಾಡಿದ ದೊಡ್ಡ ಅನ್ಯಾಯ. ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿರುವಾಗಲೇ ಮನೆ ಖಾಲಿ ಮಾಡಿಸಿದ್ದಕ್ಕೆ ಸಂಸದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ಕೊಡಗು ಲೀಡ್ ಬ್ಯಾಂಕ್ ಮ್ಯಾನೇಜರ್, ಪೊನ್ನಂಪೇಟೆ ಕೆನರಾ ಬ್ಯಾಂಕ್ ಮ್ಯಾನೇಜರ್ ಹಾಗೂ ಕೆನರಾ ಬ್ಯಾಂಕ್ CFO ಅವರೊಂದಿಗೆ ಮಾತನಾಡಿದ ಸಂಸದರು, ಕೋರ್ಟ್ ವಿಚಾರಣೆ ಬಾಕಿ ಇರುವಾಗ ಇಂತಹ ಕಠಿಣ ಕ್ರಮ ಸರಿಯಲ್ಲ, ತಕ್ಷಣ ಮುಟ್ಟುಗೋಲು ಪ್ರಕ್ರಿಯೆ ನಿಲ್ಲಿಸಿ ಎಂದು ಸೂಚಿಸಿದ್ದಾರೆ.

ಈ ಪ್ರಕರಣವನ್ನು ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತಂದು ಶಾಶ್ವತ ಪರಿಹಾರ ಕೊಡಿಸುವುದಾಗಿ ಸಂಸದರು ಭರವಸೆ ನೀಡಿದ್ದಾರೆ.