Kodagu

ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕುಂಭಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ;ಮಕರ ಸಂಕ್ರಾಂತಿಗೆ ಭವ್ಯ ಆಚರಣೆ

admincoorgdaily

ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕುಂಭಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ;ಮಕರ ಸಂಕ್ರಾಂತಿಗೆ ಭವ್ಯ ಆಚರಣೆ
ಪೊನ್ನಂಪೇಟೆ, ನ. 16: ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ಸಮೀಪದ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಿಮಲ್ಲಿಕಾರ್ಜುನ ಸ್ವಾಮೀಜಿಗಳ ನೇತೃತ್ವದಲ್ಲಿ ಹೂ ಪ್ರಶ್ನೆ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ಧಾರ್ಮಿಕ ಸಂಪ್ರದಾಯದಂತೆ ಪ್ರತಿಷ್ಠಾಪನೆಯಾದ ಬಳಿಕ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಾಭಿಷೇಕ ನೆರವೇರಿಸಬೇಕಾಗಿದ್ದು, ದೇವಸ್ಥಾನದಲ್ಲಿ ಈ ಹಿಂದೆ ಕುಂಭಾಭಿಷೇಕ ನೆರವೇರಿಸಿ ಈಗಾಗಲೇ 12 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಕುಂಭಾಭಿಷೇಕ ನೆರವೇರಿಸುವ ಕುರಿತು ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೂ ಪ್ರಶ್ನೆ ನಡೆಸಲಾಯಿತು.

ಹೂ ಪ್ರಶ್ನೆಯಲ್ಲಿ ಕಂಡುಬಂದ ವಿಚಾರಗಳ ಪ್ರಕಾರ, ದೇವಸ್ಥಾನದ ಕುಂಭಾಭಿಷೇಕವನ್ನು ಮುಂಬರುವ ಉತ್ತರಾಯಣ ಪುಣ್ಯಕಾಲದಲ್ಲಿ ನೆರವೇರಿಸುವುದು ಸೂಕ್ತವೆಂದು ತಿಳಿದುಬಂದಿದೆ. ಅದರಂತೆ ಮುಂದಿನ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಕುಂಭಾಭಿಷೇಕ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ,ಪೊನ್ನಂಪೇಟೆ ಪಟ್ಟಣದ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಶ್ರೀ ಬಸವೇಶ್ವರ ದೇವಸ್ಥಾನವು ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ದೇವಸ್ಥಾನದ ಧಾರ್ಮಿಕ ಸಂಪ್ರದಾಯ ಮತ್ತು ಪಾವಿತ್ರ್ಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಕುಂಭಾಭಿಷೇಕಕ್ಕೆ ಸಿದ್ಧತೆ ಕೈಗೊಳ್ಳುವ ಅಗತ್ಯವಿದೆ. ಈ ಧಾರ್ಮಿಕ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ದಾನಿಗಳ ನೆರವು ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಬಿ ಎನ್ ಕಾಂತಾರಾಜ್,ಉಪಾಧ್ಯಕ್ಷ ವಿ ಬಿ ರುದ್ರಪ್ಪ,ಕಾರ್ಯದರ್ಶಿ ಹೆಚ್ ಬಿ ಸುರೇಶ್, ಖಜಾಂಚಿ ಪಿ.ಟಿ ಸುರೇಶ್, ಸದಸ್ಯರಾದ ಹೆಚ್ ಎಸ್ ಮಹೇಶ್,ಮಂಜು, ಅರ್ಚಕ ಗಿರೀಶ್ ಹಾಗೂ ಭಕ್ತರು ಹಾಜರಿದ್ದರು.