Kodagu

ಪುತ್ತರಿ ಹಬ್ಬಕ್ಕೆ ಮುಹೂರ್ತ ನಿಗದಿ: ನ.25 ರಂದು ಆಚರಣೆ

admincoorgdaily

ಪುತ್ತರಿ ಹಬ್ಬಕ್ಕೆ ಮುಹೂರ್ತ ನಿಗದಿ: ನ.25 ರಂದು ಆಚರಣೆ
ಮಡಿಕೇರಿ: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಈ ಬಾರಿಯ ಪುತ್ತರಿ ಹಬ್ಬದ ಮುಹೂರ್ತ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಲಾಗಿದೆ.
ನವೆಂಬರ್ 25 ರಂದು ಬುಧವಾರ ರೋಹಿಣಿ ನಕ್ಷತ್ರದಲ್ಲಿ ಪುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ಹಬ್ಬದ ಆಚರಣೆ ಈ ಕೆಳಗಿನ ಸಮಯದಲ್ಲಿ ನಡೆಯಲಿದೆ.
ಸಂಜೆ 6.05ಕ್ಕೆ ನೆರೆ ಕಟ್ಟುವುದು, ಸಂಜೆ 7.05ಕ್ಕೆ ಕದಿರು ತೆಗೆಯುವುದು ಹಾಗೂ ರಾತ್ರಿ 8.05ಕ್ಕೆ ಭೋಜನ ನಡೆಯಲಿದೆ.
ಭಕ್ತರು ನಿಗದಿತ ಸಮಯದಂತೆ ಪುತ್ತರಿ ಹಬ್ಬ ಆಚರಿಸುವಂತೆ ದೇವಾಲಯದ ವತಿಯಿಂದ ತಿಳಿಸಲಾಗಿದೆ.