Kodagu

ಕ.ಸಾ.ಪ.ವತಿಯಿಂದ ಶಿರಂಗಾಲ ಕಾಲೇಜಿನಲ್ಲಿ ಮುಲ್ಲೇಂಗಡ ಬೇಬಿ ಚೋಂದಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮ

admincoorgdaily

ಕ.ಸಾ.ಪ.ವತಿಯಿಂದ ಶಿರಂಗಾಲ ಕಾಲೇಜಿನಲ್ಲಿ ಮುಲ್ಲೇಂಗಡ ಬೇಬಿ ಚೋಂದಮ್ಮ  ದತ್ತಿ ಉಪನ್ಯಾಸ ಕಾರ್ಯಕ್ರಮ
ಕುಶಾಲನಗರ,ಸೆ.16: ಕನ್ನಡದ ಪ್ರಥಮ ಕಥೆಗಾರ್ತಿ ಕೊಡಗಿನ ಗೌರಮ್ಮ ( 1912- 1939)  ಆಧುನಿಕ ಕನ್ನಡ ಸಾಹಿತ್ಯದ ಆರಂಭಿಕ ಹಂತದಲ್ಲಿ ಮಹಿಳಾ ಧ್ವನಿಯಾಗಿ ಮೂಡಿಬಂದವರು.
ಗೌರಮ್ಮನವರ ಪ್ರಮುಖ ಕೃತಿಗಳು: 'ಕಂಬನಿ' (ಸಣ್ಣಕಥೆಗಳ ಸಂಕಲನ), 'ಚೂಡಾಮಣಿ'ಯಾಗಿದ್ದು,
ಇವರ ಕಥೆಗಳಲ್ಲಿ
ಸ್ತ್ರೀವಾದಿ ಚಿಂತನೆಗಳು, ಬಡವರ ಶೋಷಣೆ ಮತ್ತು ಸಾಮಾಜಿಕ ಸುಧಾರಣೆಯ ಮನೋಧರ್ಮವನ್ನು ಒಳಗೊಂಡಿವೆ ಎಂದು
 ತೊರೆನೂರು ಸರ್ಕಾರಿ
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಆರ್.ಸತ್ಯನಾರಾಯಣ ಬಣ್ಣಿಸಿದರು.

ಕೊಡಗು ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ತು( ಕ.ಸಾ.ಪ.), ಕುಶಾಲನಗರ ತಾಲ್ಲೂಕು ಕ.ಸಾ.ಪ. ಘಟಕ, ಹೆಬ್ಬಾಲೆ ವಲಯ ಕ.ಸಾ.ಪ. ಘಟಕ  ಹಾಗೂ   ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸೌರಭ ಕನ್ನಡ ಭಾಷಾ ಸಂಘದ ಆಶ್ರಯದಲ್ಲಿ  ಬುಧವಾರ ಮುಲ್ಲೇಂಗಡ ಬೇಬಿ ಚೋಂದಮ್ಮ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಕೊಡಗಿನ ಮಹಿಳಾ ಸಾಹಿತಿಗಳು" ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ರಾಷ್ಟ್ರಪತಿ ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೊಡಗಿಗೆ ಭೇಟಿ ನೀಡಿದಾಗ ತಮ್ಮ ಆಭರಣಗಳನ್ನೆಲ್ಲಾ ದೇಶಕ್ಕಾಗಿ ದಾನ ಮಾಡಿದ ಮಹಾನ್ ದೇಶಪ್ರೇಮಿ ಗೌರಮ್ಮನವರು ಎಂದರು.

   ಕೊಡಗಿನಲ್ಲಿ ಕೊಡಗಿನ ಗೌರಮ್ಮನಿಂದ ಹಿಡಿದು ಇಂದಿನವರೆಗೂ ಕೃತಿಗಳನ್ನು ರಚಿಸಿದ ಪ್ರಮುಖ ಸಾಹಿತಿಗಳು ಮತ್ತು ಕವಿಯತ್ರಿಗಳು ಹಾಗೂ ಅವರಿಂದ ರಚಿಸಲ್ಪಟ್ಟ ಕೃತಿಗಳನ್ನು ಪರಿಚಯಿಸುವುದರೊಂದಿಗೆ ಮಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಮಹಿಳೆಯರಿಂದ ಉತ್ತಮ ಸಾಹಿತ್ಯ ಕೃತಿಗಳು ರಚನೆಯಾಗಲಿ ಎಂದು ಹೇಳಿದರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಿಳಾ ಸಾಹಿತ್ಯಕ್ಕೆ ಒಂದು ಗಟ್ಟಿ ನೆಲೆ ಇದೆ. ಅದರಲ್ಲಿಯೂ ಪ್ರಕೃತಿಯ ಮಡಿಲಾದ ಕೊಡಗು ಜಿಲ್ಲೆಯು ಸಾಹಿತ್ಯ ಕ್ಷೇತ್ರಕ್ಕೆ ಕೇವಲ ವೀರರನ್ನು ಮಾತ್ರವಲ್ಲದೆ, ಸಾಹಿತ್ಯದ ಮೂಲಕ ಸಮಾಜವನ್ನು ಜಾಗೃತಗೊಳಿಸಿದ ಮಹೋನ್ನತ ಮಹಿಳಾ ಸಾಹಿತಿಗಳನ್ನು ನೀಡಿದೆ. ಅಡುಗೆ ಮನೆಯ ಜಂಜಡಗಳಿಂದ ಹೊರಬಂದು, ಸಮಾಜದ ಶೋಷಣೆ ಹಾಗೂ ಸ್ತ್ರೀ ಸಂವೇದನೆಗಳ ವಿರುದ್ಧ ಧ್ವನಿ ಎತ್ತಿದ ಹೆಗ್ಗಳಿಕೆ ಕೊಡಗಿನ ಲೇಖಕಿಯರದ್ದಾಗಿದೆ ಎಂದು ಸತ್ಯನಾರಾಯಣ ಹೇಳಿದರು.

     ಕೊಡಗಿನ ಶ್ರೀಮಂತ ಸಂಸ್ಕೃತಿಯನ್ನು ಜಾನಪದ, ಕಾವ್ಯ ಮತ್ತು ಲಲಿತ ಪ್ರಬಂಧಗಳ ಮೂಲಕ ಉಳಿಸಿ ಬೆಳೆಸಿದ ಇತರ ಪ್ರಮುಖ ಮಹಿಳಾ ಸಾಹಿತಿಗಳು.
ಕೊಡಗಿನ ಶ್ರೀಮಂತ ಸಂಸ್ಕೃತಿಯನ್ನು ಜಾನಪದ, ಕಾವ್ಯ ಮತ್ತು ಲಲಿತ ಪ್ರಬಂಧಗಳ ಮೂಲಕ ಉಳಿಸಿ ಬೆಳೆಸಿದ ಇತರ ಪ್ರಮುಖ ಮಹಿಳಾ ಸಾಹಿತಿಗಳು
ಬುಟ್ಟಿಯಂಡ ದೇವಕ್ಕಿಯಮ್ಮ ಹಾಗೂ ಕೂತಂಡ ಪಾರ್ವತಿ ಪೂವಯ್ಯ ಅವರು ಕೊಡವ, ಜಾನಪದ ಮತ್ತು ಸಂಸ್ಕೃತಿಯನ್ನು ಸಾಹಿತ್ಯ ರೂಪದಲ್ಲಿ ದಾಖಲಿಸಿದ ಪ್ರಮುಖರಾಗಿದ್ದಾರೆ.

ಡಾ. ಟಿ. ವಿ. ಪದ್ಮಾಶೇಖರ್ ಹಾಗೂ ಡಾ. ಕವಿತಾ ರೈ ಅವರು ವೈಚಾರಿಕ ಲೇಖನಗಳು, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
ಕೊಡಗಿನ ಮಹಿಳಾ ಸಾಹಿತಿಗಳ   ಸಾಹಿತ್ಯದ  ಬರವಣಿಗೆಯಲ್ಲಿ
ಸಾಮಾಜಿಕ ಕಳಕಳಿ, ಸ್ತ್ರೀ ಸಮಾನತೆಯ ಹಂಬಲ ಹಾಗೂ ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವಿತ್ತು. ಇಂದಿನ ಯುವ ಪೀಳಿಗೆಗೆ ಇವರ ಕೃತಿಗಳು ಪ್ರೇರಣೆಯಾಗಿದ್ದು, ಇವರ ಸಾಹಿತ್ಯಿಕ ಕೊಡುಗೆಯನ್ನು ಸ್ಮರಿಸುವುದು ಮತ್ತು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸತ್ಯನಾರಾಯಣ ಹೇಳಿದರು.

 ಮಂಡೀರ ಜಯ ಅಪ್ಪಣ್ಣ, ಪಾಂಡಂಡ ತಂಗಮ್ಮ, ಕುಸುಮಾ ಶ್ಯಾನ್ ಬಾಗ್, ಮತ್ತು ಡಾ. ರೇಖಾ ವಸಂತ್ ಮುಂತಾದವರೆಲ್ಲರೂ ಸಣ್ಣಕಥೆ, ಕವನ, ಗೃಹ ವಿಜ್ಞಾನ ಮತ್ತು ಬಾಲಸಾಹಿತ್ಯದ ಮೂಲಕ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಕೊಡಗಿನ ಶ್ರೀಮಂತ ಸಂಸ್ಕೃತಿಯನ್ನು ಜಾನಪದ, ಕಾವ್ಯ ಮತ್ತು ಲಲಿತ ಪ್ರಬಂಧಗಳ ಮೂಲಕ ಉಳಿಸಿ ಬೆಳೆಸಿದ ಇತರ ಪ್ರಮುಖ ಮಹಿಳಾ ಸಾಹಿತಿಗಳು
ಬುಟ್ಟಿಯಂಡ ದೇವಕ್ಕಿಯಮ್ಮ ಹಾಗೂ ಕೂತಂಡ ಪಾರ್ವತಿ ಪೂವಯ್ಯ ಅವರು ಕೊಡವ, ಜಾನಪದ ಮತ್ತು ಸಂಸ್ಕೃತಿಯನ್ನು ಸಾಹಿತ್ಯ ರೂಪದಲ್ಲಿ ದಾಖಲಿಸಿದ ಪ್ರಮುಖರಾಗಿದ್ದಾರೆ ಎಂದರು.

ದತ್ತಿ ದಾನಿಯೂ ಆದ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ,
  ಮಹಿಳಾ ಸಾಹಿತ್ಯವೆಂದರೆ ಮಹಿಳೆಯರ ಅನುಭವಗಳು, ಸಂವೇದನೆಗಳು ಮತ್ತು ಅವರ ಬದುಕಿನ ನೋವು-ನಲಿವು
ಗಳನ್ನು ಸ್ತ್ರೀ ದೃಷ್ಟಿಕೋನದಿಂದ ವ್ಯಕ್ತಪಡಿಸುವ ಬರವಣಿಗೆ
ಯಾಗಿದೆ ಎಂದರು.

ಇಂತಹ ದತ್ತಿ ಕಾರ್ಯಕ್ರಮಗಳು ಮಕ್ಕಳಲ್ಲಿ ಉತ್ತಮ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಪಿ.ಸೋಮಚಂದ್ರ,
ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಾಹಿತ್ಯ ಅಭಿರುಚಿ ಹಾಗೂ
ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು, ವೃತ್ತ ಪತ್ರಿಕೆಗಳನ್ನು ಓದುವುದರಿಂದ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್,
ದತ್ತಿ ಸಾಹಿತ್ಯ ಕಾರ್ಯಕ್ರಮದಲ್ಲಿ ಪ್ರತಿವರ್ಷ ಸಾಹಿತ್ಯಿಕ ಉಪನ್ಯಾಸಗಳು, ವಿಚಾರ ಸಂಕಿರಣಗಳಂತಹ ಸಾಹಿತ್ಯ ಚಟುವಟಿಕೆಗಳು/ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.

ಇಂತಹ ಉಪನ್ಯಾಸ ಕಾರ್ಯಕ್ರಮಗಳು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿವೆ ಎಂದರು.
ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸುವುದರೊಂದಿಗೆ ಹೊಸ ವಿಚಾರಗಳನ್ನು ತಿಳಿಸಿ ಕನ್ನಡತನವನ್ನು ಬೆಳೆಸುವ  ಕಾರ್ಯ ಮಾಡುತ್ತವೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಎಚ್.ಎಂ.ರಘು ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ಉತ್ತಮ ಶಿಕ್ಷಣದ ಜತೆಗೆ ಸಾಹಿತ್ಯ, ಕಲೆ- ಸಂಸ್ಕ್ರತಿ ಅಭಿರುಚಿ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.

       ಅಧ್ಯಕ್ಷತೆ ವಹಿಸಿದ್ದ
ಹೆಬ್ಬಾಲೆ ವಲಯ ಕ.ಸಾ.ಪ.ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, 
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಸಾಹಿತಿಗಳ ಪುಸ್ತಕಗಳನ್ನು ಓದುವ ಮೂಲಕ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯದ ಅಭಿರುಚಿಯನ್ನು  ಬೆಳೆಸಿಕೊಳ್ಳು 
ವುದರಿಂದ ವ್ಯಕ್ತಿತ್ವ  ವಿಕಸನಗೊಳ್ಳುತ್ತದೆ ಎಂದರು.

 ಬಹುಮಾನ ವಿತರಿಸಿ
ಮಾತನಾಡಿದ ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಎಸ್.
ಚಂದ್ರಶೇಖರ್, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಹಿತ್ಯ ಕಲಿಕೆಗೂ ವಿಶೇಷ ಗಮನಹರಿಸಬೇಕು ಎಂದರು.

ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಶೈಲಜಾ ಮನು ಅಚ್ಚಮ್ಮಯ್ಯ ಮಾತನಾಡಿದರು.
ತಾಲ್ಲೂಕು ಕ.ಸಾ.ಪ.ಘಟಕದ ಕೋಶಾಧಿಕಾರಿ ಕೆ.ವಿ.ಉಮೇಶ್, ಹೆಬ್ಬಾಲೆ ವಲಯ ಕ.ಸಾ.ಪ. ಘಟಕದ
 ಕಾರ್ಯದರ್ಶಿ  ಎಚ್.ಎನ್.ಸುಬ್ರಮಣ್ಯ,
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಪಾರ್ವತಮ್ಮ ಕಾಳಿಂಗಪ್ಪ, ನಿವೃತ್ತ ಕೃಷಿ ಅಧಿಕಾರಿ ಎಸ್.ವಿ.ಶಿವಾನಂದ, 
ಕನ್ನಡ ಭಾಷಾ ಶಿಕ್ಷಕ ಎಚ್.ಆರ್.ಶೇಖರ್, ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಎಸ್.ಲೋಕೇಶ್, ಮಹಿಳಾ ಸಂಘಟಕಿ ಲೇಖನ
ಧರ್ಮಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಾನಪದ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ನೀಡಲಾಯಿತು.