ನ.21 ರಂದು ಮರಗೋಡಿನಲ್ಲಿ ಮೂರ್ನಾಡು ಹೋಬಳಿ ಕನ್ನಡ ಹಬ್ಬ
admincoorgdaily

ಮಡಿಕೇರಿ: ಕನ್ನಡ ಕೇವಲ ಭಾಷೆಯಲ್ಲ, ಅದು ಬದುಕು ಎಂಬ ಸಂದೇಶದೊಂದಿಗೆ ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ.೨೧ರಂದು ಮರಗೋಡಿನಲ್ಲಿ ಕನ್ನಡ ಹಬ್ಬ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಹೇಳಿದರು.
ಮೂರನೇ ವರ್ಷದ ಈ ಹಬ್ಬದ ಕೇಂದ್ರಬಿಂದು ಮುಂದಿನ ಪೀಳಿಗೆ. ನಾಡು, ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆಯನ್ನು ಮಕ್ಕಳಿಗೆ ತಲುಪಿಸುವುದೇ ಪರಿಷತ್ತಿನ ಮುಖ್ಯ ಗುರಿಯಾಗಿದೆ. ಅಂದು ಬೆೆಳಿಗ್ಗೆ ೮.೩೦ಕ್ಕೆ ಆರಂಭವಾಗುವ ಮೆರವಣಿಗೆಯಲ್ಲಿ ಗೊಂಬೆಯಾಟ, ಡೊಳ್ಳು ಕುಣಿತ, ವೀರಗಾಸೆ ಜನಪದ ಸೊಗಡು ಹರಡಲಿದೆ. ಬಳಿಕ ರಾಷ್ಟ್ರ ಹಾಗೂ ನಾಡಧ್ವಜಾರೋಹಣ, ಸಾಧಕರಿಗೆ ಗೌರವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಸ್ಮರಣ ಸಂಚಿಕೆ ಅನಾವರಣ, ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅವರ ಪುಸ್ತಕ ಬಿಡುಗಡೆ, ಜಾದೂ, ನೃತ್ಯ, ಹಾಡುಗಾರಿಕೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ, ಶಾಸಕ ಮಂತರ್ ಗೌಡ, ಎಂಎಲ್‌ಸಿ ಸುಜಾ ಕುಶಾಲಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದು ಒಂದು ದಿನದ ಸಂಭ್ರಮವಲ್ಲ, ಕನ್ನಡಿಗರನ್ನು ಒಗ್ಗೂಡಿಸುವ ಅಭಿಯಾನ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಪದಾಧಿಕಾರಿಗಳಾದ ಕಾನಡ್ಕ ಶ್ಯಾಮ್, ಪ್ರಿಯ ದೇವಯ್ಯ, ಮೋಹನ್ ದಾಸ್, ಜನಾರ್ದನ, ಧನಂಜಯ ಇದ್ದರು.