Kodagu

ಕೊಡಗಿನ ಜನರಿಗೆ ಮೈಸೂರು ಮಣಿಪಾಲ್ ಆಸ್ಪತ್ರೆ ಸೇವೆ ವಿಸ್ತರಣೆ

admincoorgdaily

ಕೊಡಗಿನ ಜನರಿಗೆ ಮೈಸೂರು ಮಣಿಪಾಲ್ ಆಸ್ಪತ್ರೆ ಸೇವೆ ವಿಸ್ತರಣೆ
ಮಡಿಕೇರಿ: ಜೀರ್ಣಾಂಗ ಮತ್ತು ಲಿವರ್ ಕಾಯಿಲೆಗಳಿಗೆ ಕೊಡಗಿನ ಜನರು ದೂರದ ನಗರಗಳಿಗೆ ತೆರಳುವುದನ್ನು ತಪ್ಪಿಸಲು ಮೈಸೂರಿನ ಮಣಿಪಾಲ್ ಆಸ್ಪತ್ರೆ ವಿಶೇಷ ಔಟ್‌ರೀಚ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಆಸ್ಪತ್ರೆಯ ನಿರ್ದೇಶಕ ಸಂದೀಪ್ ಪಟೇಲ್.ಬಿ.ಜೆ ತಿಳಿಸಿದರು.

ಮಡಿಕೇರಿ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್ (MIGS) ನಲ್ಲಿ ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ, ಎಂಡೋಸ್ಕೋಪಿ, ಜಿಐ ಆಂಕಾಲಜಿ ಮತ್ತು ಲಿವರ್ ಕಸಿ ಸೇವೆ ಒಂದೇ ಸೂರಿನಡಿ ಲಭ್ಯವಿದೆ ಎಂದರು.

ಡಾ.ಸತೀಶ್ ರಾವ್ ಎ.ಕೆ ಮಾತನಾಡಿ, ಭಾರತದಲ್ಲಿ ಕೇವಲ ಶೇ.25.5 ರಷ್ಟು ಕೇಂದ್ರಗಳಲ್ಲಿ ಮಾತ್ರ ಥರ್ಡ್ ಸ್ಪೇಸ್ ಎಂಡೋಸ್ಕೋಪಿ ಸೌಲಭ್ಯವಿದೆ. ಇಎಸ್‌ಡಿ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆ ಇಲ್ಲದೆ ಆರಂಭಿಕ ಕ್ಯಾನ್ಸರ್ ತೆಗೆಯಬಹುದು ಎಂದರು.

ಡಾ.ವಾಸುದೇವ್ ಪೈ ಹೊಸದುರ್ಗ ಮಾತನಾಡಿ, ದೇಶದಲ್ಲಿ ವಾರ್ಷಿಕ 1.7 ಲಕ್ಷಕ್ಕೂ ಹೆಚ್ಚು ಜಠರಕರುಳಿನ ಕ್ಯಾನ್ಸರ್ ಪ್ರಕರಣ ವರದಿಯಾಗುತ್ತಿದೆ. ಹೊಟ್ಟೆ ನೋವು, ಮಲವಿಸರ್ಜನೆಯಲ್ಲಿ ಬದಲಾವಣೆಯನ್ನು ನಿರ್ಲಕ್ಷಿಸಬಾರದು ಎಂದರು.

ಡಾ.ನಿಶ್ಚಯ್ ಆರ್. ಮಾತನಾಡಿ, 30-50 ವಯಸ್ಸಿನವರಲ್ಲಿ ಫ್ಯಾಟಿ ಲಿವರ್ ಹೆಚ್ಚುತ್ತಿದೆ. ಕಳೆದ 6 ತಿಂಗಳಲ್ಲಿ 5 ಲಿವರ್ ಕಸಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಉಪೇಂದ್ರ ಶೆಣೈ ಉಪಸ್ಥಿತರಿದ್ದರು.