ಅಂತರರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ನಂಗಾರು ಯುಗನ್ ಗೆ ಕಂಚಿನ ಪದಕ
admincoorgdaily

ಮಡಿಕೇರಿ;
ಇತ್ತೀಚೆಗೆ ಮಲೇಷ್ಯಾ ದೇಶದ ರಾಜಧಾನಿ ಕೌಲಾಲಂಪುರದಲ್ಲಿ ನಡೆದ ಅಂತರರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ನಂಗಾರು ಯುಗನ್ ಭಾರತವನ್ನು ದೇಶವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಗೆದ್ದಿರುತ್ತಾರೆ.
ಮಹೇಶ್ ನಂಗಾರು ಸೋಮಣ್ಣ ಮತ್ತು ಡಾ. ಯಶಸ್ವಿನಿ ಕೆ.ಎ ಅವರ ಪುತ್ರ ಹಾಗೂ ಬೆಂಗಳೂರಿನ ಯಲಹಂಕ ಗೌಡ ಸಮಾಜದ ಅಧ್ಯಕ್ಷರಾದ ಕುಂಞ್ಙಾಳಿಯನ ಅಜೀತ್ ಕುಮಾರ್
ಅವರ ಮೊಮ್ಮಗನಾದ ಯುಗನ್, ಟೇಕ್ವಾಂಡೋ ಪಂದ್ಯದ 14 ವರ್ಷದೊಳಗಿನ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಇದಕ್ಕೂ ಮುನ್ನ, ಯುಗನ್ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ, ತಮಿಳುನಾಡು ಮತ್ತು ಕೇರಳದಲ್ಲಿ ನಡೆದ ದಕ್ಷಿಣ ಭಾರತದ ರಾಜ್ಯಗಳ ವಲಯದ ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದು ತಮ್ಮ ಪ್ರತಿಭೆಯನ್ನು ಮೆರೆದಿದ್ದರು.
ಯುಗನ್ ಅವರು ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಸತತವಾಗಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.