ನಂಜರಾಯಪಟ್ಟಣ:ಬೈಕ್ ಗಳ ಮುಖಾಮುಖಿ ಡಿಕ್ಕಿ: ಸಾವಿನ ಸಂಖ್ಯೆ ಮೂರಕ್ಕೇರಿಕೆ, ಆಸ್ಪತ್ರೆಯಲ್ಲಿ ಸಾವು
admincoorgdaily

ಕುಶಾಲನಗರ;
ನಂಜರಾಯಪಟ್ಟಣದಲ್ಲಿ ಎರಡು ಬೈಕ್ ಗಳ ನಡುವೆ ನಡೆದಿದ್ದ ಭೀಕರ ಮುಖಾಮುಖಿ ಡಿಕ್ಕಿ ಪ್ರಕರಣದಲ್ಲಿ ಗಾಯಗೊಂಡಿದ್ದ ಮೂರನೇ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಂಗಸಮುದ್ರದ ಹರೀಶ (ಪಾಂಡಿ) (ವಿರುಪಾಕ್ಷಪುರ) ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಬ್ಬಿನಗದ್ದೆಯ ರಾಫ್ಟಿಂಗ್ ಗೈಡ್ ಸುಬ್ರಮಣಿ (28) ಮತ್ತು ತ್ಯಾಗತ್ತೂರಿನ ರಿನಾಸ್ (21) ಮೃತಪಟ್ಟಿದ್ದರು. ಈ ಮೂಲಕ ಸಾವಿನ ಸಂಖ್ಯೆ 3ಕ್ಕೆ ಏರಿದೆ. ಇನ್ನೊಬ್ಬ ಗಾಯಾಳು ತ್ಯಾಗತ್ತೂರಿನ ಶ್ವಾಲಿನ್ ಚಿಕಿತ್ಸೆ ಪಡೆಯುತ್ತಿದ್ದಾರೆ.