Kodagu

ನಂಜರಾಯಪಟ್ಟಣ: ಕಾರು ಅಡ್ಡಗಟ್ಟಿ ವ್ಯಕ್ತಿ ಮೇಲೆ ಹಲ್ಲೆ

admincoorgdaily

ನಂಜರಾಯಪಟ್ಟಣ: ಕಾರು ಅಡ್ಡಗಟ್ಟಿ ವ್ಯಕ್ತಿ ಮೇಲೆ ಹಲ್ಲೆ
1002682388.jpg


ಸಿದ್ದಾಪುರ;
ಸಿದ್ದಾಪುರದಿಂದ ಕುಶಾಲನಗರ ಭಾಗಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಿದ್ದಾಪುರ ಸಮೀಪದ ನಲ್ಲತೇಕೆಯ ಕರೀಂ ಮುಸ್ಲಿಯಾರ್ ಮೇಲೆ ಗುಂಪೊಂದು ಕಾರು ಅಡ್ಡಗಟ್ಟಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಕರೀಂ ಮುಸ್ಲಿಯಾರ್ ಚಾಲನೆ ಮಾಡುತ್ತಿದ್ದ ಕಾರಿಗೆ ಸ್ಕಾರ್ಪಿಯೋ ಕಾರೊಂದು ಅಡ್ಡಗಟ್ಟಿ ಕಾರಿಂದ ಎಳೆದು ಹಲ್ಲೆ ನಡೆಸಿದೆ ಎನ್ನಲಾಗಿದೆ. ಇದೇ ಮಾರ್ಗವಾಗಿ ಬರುತ್ತಿದ್ದ ಇತರ ವಾಹನಗಳ ಸವಾರರು ಇದನ್ನು ಪ್ರಶ್ನಿಸಿದ್ದು, ಸ್ಥಳದಲ್ಲಿ ಪರಸ್ಪರ ವಾಗ್ವಾದ ನಡೆದು ಘರ್ಷಣೆ ನಡೆದಿದೆ ಎನ್ನಲಾಗಿದೆ.
ಕರೀಂ ಮುಸ್ಲಿಯಾರ್ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.