ನಾಪೋಕ್ಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ; ಸೇಕ್ರೆಡ್ ಹಾರ್ಟ್ಸ್ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
admincoorgdaily

ನಾಪೋಕ್ಲು : ನಾಪೋಕ್ಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಡಾ.ಬಿ. ಆರ್ ಅಂಬೇಡ್ಕರ್ ವಸತಿಶಾಲೆಯ ಆಶ್ರಯದಲ್ಲಿ ನಡೆದ ಸ್ಪರ್ಧೆಗಳಲ್ಲಿ ಸೇಕ್ರೆಡ್ ಹಾರ್ಟ್ಸ್ ಶಾಲೆಯ ವಿದ್ಯಾರ್ಥಿಗಳಾದ ಆಯಿಷತ್ ಹನ ಚರ್ಚಾ ಸ್ಪರ್ಧೆ ಪ್ರಥಮ,ಹಿಂದಿ ಕಂಠಪಾಠ ನಿದಾ ಟಿ.ಹೆಚ್. ಪ್ರಥಮ,ಅರಬಿಕ್ ಧಾರ್ಮಿಕ ಪಠಣ ಪಾತಿಮಾ ಟಿ.ಎ. ಪ್ರಥಮ,ಧಾರ್ಮಿಕ ಪಠಣ ಆಫ್ರಿನ್ ಪ್ರಥಮ,ಚಿತ್ರಕಲೆ ಜಕ್ಸ ಪೂವಣ್ಣ ಪ್ರಥಮ,ಹಾಸಿರ್ ಘಜಲ್ ಪ್ರಥಮ ಸ್ಥಾನ ಪಡೆದು ಮೂರ್ನಾಡಿನ ಮೂರ್ನಾಡಿನಲ್ಲಿ ನಡೆಯಲಿರುವ ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.
ಧಾರ್ಮಿಕ ಪಠಣ ಜವಾದ್ ಕೆ ಎಂ, ಕಂಠಪಾಠ ಆಂಗ್ಲಭಾಷೆ ರಿಧಾ ಪಿ.ಎಚ್, ಭಾಷಣ ಆಂಗ್ಲ ಭಾಷೆ ಫಾತಿಮಾ ನಬಲ ಎಂ, ಜಾನಪದ ಗೀತೆ ಶ್ರೇಯ ಬಿ ಬಿ, ರಸಪ್ರಶ್ನೆ ಆಯಿಷತ್ ಹನಾ ಫಾತಿಮಾ ನಬಲ ಇವರು ದ್ವಿತೀಯ ಸ್ಥಾನ ಪಡೆಡಿರುತ್ತಾರೆ.ಪಾರೀಶ ಪಿ. ಎಂ. ಚದ್ಮವೇಶ, ಫಹದ್ ಎ.ಎನ್ ಮಿಮಿಕ್ರಿ, ಚೇತನ್, ಕೆ.ಸಿ ಕವಾಲಿ, ಆಶಿರ್, ಆಫ್ರಿನ್, ಮಿಸ್ಅಬ್, ಮಶುಕ್ , ಸಾಧಿಕ್, ಅನಸ್, ಜಾನಪದ ನೃತ್ಯ ಶ್ರೇಯ ಲೀನಾ ನಶೀನಾ
,ಕೌಶಿಕ,ವೀಕ್ಷಿತ ಪೂರ್ವಿಕ ತೃತೀಯ ಸ್ಥಾನಪಡೆದು ಕೊಂಡಿದ್ದಾರೆ.
ತರಬೇತಿಮೇಲ್ವಿಚಾರಕರಾಗಿ ಶಾಲೆಯ ಶಿಕ್ಷಕಿಯರಾದ ಮೈನಾ ಕುಮಾರಿ ಬಿ.ಆರ್ ಮತ್ತು ಎ. ಟಿ.ದಿವ್ಯಅವರು ಕಾರ್ಯ ನಿರ್ವಹಿಸಿದರು. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ :ಝಕರಿಯ ನಾಪೋಕ್ಲು