Kodagu

ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ನವರಾತ್ರಿ ಹಬ್ಬದ ಸಂಭ್ರಮ

admincoorgdaily

ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ನವರಾತ್ರಿ ಹಬ್ಬದ ಸಂಭ್ರಮ
ಮಡಿಕೇರಿ : ಕುಶಾಲನಗರದ ಬಸವೇಶ್ವರ ಬಡಾವಣೆಯ ಮಹಿಳೆಯರು ನವರಾತ್ರಿ ಅಂಗವಾಗಿ ಬಡಾವಣೆಯ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಆದಿಶಕ್ತಿ ದುರ್ಗಾಮಾತೆಯ ನವದುರ್ಗೆಯ ರೂಪಗಳಿಗೆ ಅನುಗುಣವಾಗಿ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿರುವರು.
ನವರಾತ್ರಿಯ ನಾಲ್ಕನೇ ದಿನವಾದ ಇಂದು ಲಲಿತ ಸಹಸ್ರನಾಮ ಪಾರಾಯಣ ಮಾಡಿದ ಮಹಿಳೆಯರು ನೀಲಿ ಸೀರೆ ಧರಿಸಿ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. 

ಮೂರನೇ ದಿನ ಹಣೆಯ ಮೇಲೆ ಚಂದ್ರಾಕಾರದ ಗಂಟೆಯನ್ನು ಧರಿಸಿ, ಹುಲಿಯನ್ನು ವಾಹನವಾಗಿ ಹೊಂದಿರುವ ದೇವಿಯ ರೂಪವನ್ನು ಆರಾಧಿಸಲಾಯಿತು. ಮಹಿಳೆಯರು ಕೆಂಪು ಬಣ್ಣದ ಸೀರೆಯನ್ನು ಧರಿಸಿ, ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಜಯದಶಮಿಯವರೆಗೆ ದುರ್ಗಾ ಆರಾಧನೆ ನಡೆಯಲಿದೆ ಎಂದು ಬಸವೇಶ್ವರ ಬಡಾವಣೆಯ ಪ್ರಮುಖರು ತಿಳಿಸಿದ್ದಾರೆ.