Kodagu

ದುಬಾರೆ ಸಾಕಾನೆ ಶಿಬಿರಕ್ಕೆ ನೆಲ್ಲಿಹುದಿಕೇರಿ ಪಿಯು ಕಾಲೇಜು ವಿದ್ಯಾರ್ಥಿಗಳ ಭೇಟಿ

admincoorgdaily

ದುಬಾರೆ ಸಾಕಾನೆ ಶಿಬಿರಕ್ಕೆ ನೆಲ್ಲಿಹುದಿಕೇರಿ ಪಿಯು ಕಾಲೇಜು ವಿದ್ಯಾರ್ಥಿಗಳ ಭೇಟಿ
ಸಿದ್ದಾಪುರ:-
ನೆಲ್ಯಹುದಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕುಶಾಲನಗರ ಸಮೀಪದ ನಂಜರಾಯಪಟ್ಟಣದಲ್ಲಿರುವ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ಕ್ಷೇತ್ರ ಅಧ್ಯಯನ ನಡೆಸಿದರು.

ಕ್ಷೇತ್ರ ಅಧ್ಯಯನದ ಅಂಗವಾಗಿ  ವಿದ್ಯಾರ್ಥಿಗಳು ಸಾಕಾನೆ ಶಿಬಿರದ ಕಾರ್ಯವೈಖರಿ, ಆನೆಗಳ ನಿರ್ವಹಣೆ ಹಾಗೂ ಕಾವಾಡಿಗಳ ಜೀವನಶೈಲಿಯ ಕುರಿತು ಮಾಹಿತಿ ಸಂಗ್ರಹಿಸಿದರು ಕಾವಾಡಿಗಳೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು ಆನೆಗಳ ಸ್ವಭಾವ, ಅವುಗಳ ಆರೈಕೆ, ಆಹಾರ ಪದ್ಧತಿ ಹಾಗೂ ಕಾವಾಡಿಗಳ ದೈನಂದಿನ ಕರ್ತವ್ಯಗಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡರು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಿ ಅಧ್ಯಯನಕ್ಕೆ ಸಹಕರಿಸಿದರು.

ಕ್ಷೇತ್ರ ಅಧ್ಯಯನ ಕಾರ್ಯಕ್ರಮ ದಲ್ಲಿ
ಕಾಲೇಜಿನ ಪ್ರಾಂಶುಪಾಲರಾದ ಅಂಥೋಣಿ ವಿವಿಯನ್ ಅಲ್ವಾರೀಸ್ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕಿ ಭಾಗ್ಯಜ್ಯೋತಿ, ಸಮಾಜಶಾಸ್ತ್ರ ಉಪನ್ಯಾಸಕರಾದ ಧನಂಜಯ ಕುಮಾರ್ ಎಸ್.ಎಂ. ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಕ್ಷೇತ್ರ ಅಧ್ಯಯನವು ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ಪ್ರಾಯೋಗಿಕ ಜ್ಞಾನ ಪಡೆಯಲು ಸಹಕಾರಿಯಾಯಿತು.