ವಿರಾಜಪೇಟೆಯಲ್ಲಿ ನೇತಾಜಿ ಉತ್ಸವ ಸಮಿತಿ ಗಣೇಶೋತ್ಸವ: ಶಾಸಕ ಎ.ಎಸ್.ಪೊನ್ನಣ್ಣ ಭಾಗಿ
admincoorgdaily

ವಿರಾಜಪೇಟೆ:- ವಿರಾಜಪೇಟೆ ನೆಹರು ನಗರದ ನೇತಾಜಿ ಉತ್ಸವ ಸಮಿತಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಭಾಗವಹಿಸಿ ಗಣೇಶನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಮಾಳೇಟೀರ ಬೋಪಣ್ಣ, ಮಾಜಿ ಪುರಸಭೆ ಸದಸ್ಯರಾದ ರಾಜೇಶ್ ಪದ್ಮನಾಭ, ರಾಫಿ, ಸಂತೋಷ್ ಹಾಗೂ ಸಮಿತಿಯ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.