ಶ್ರೀ ವಿನಾಯಕ ಯುವಕ ಮಿತ್ರ ಮಂಡಳಿಗೆ ನೂತನ
admincoorgdaily

ಪದಾಧಿಕಾರಿಗಳ ಆಯ್ಕೆ
ಮಡಿಕೇರಿ: ನಗರದ ಮಹದೇವಪೇಟೆಯ ಶ್ರೀ ವಿನಾಯಕ ಯುವಕ ಮಿತ್ರ ಮಂಡಳಿಯ 47ನೇ ವರ್ಷದ ಅದ್ಧೂರಿ ಗಣೇಶೋತ್ಸವದ ಅಂಗವಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಮಂಡಳಿಯ ಅಧ್ಯಕ್ಷರಾಗಿ ಅಜಯ್ ಕೆ.ಆರ್., ಉಪಾಧ್ಯಕ್ಷರಾಗಿ ಕೀರ್ತನ್ ಕೆ.ಎಸ್., ಗೌರವಾಧ್ಯಕ್ಷರಾಗಿ ಅಮಿತ್ ಜಿ.ಕೆ., ಖಜಾಂಜಿಯಾಗಿ ಅರ್ಜುನ್ ಕಿಶೋರ್ ಎಸ್. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗ್ ಸುಜಯ್ ವಿ. ಜೆ. ಆಯ್ಕೆಯಾಗಿದ್ದಾರೆ.
47ನೇ ವರ್ಷದ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲು ಮಂಡಳಿಯ ವತಿಯಿಂದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನೂತನ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.