Kodagu

ಟಿ.ಶೆಟ್ಟಿಗೇರಿಯಲ್ಲಿ ನೂತನ ಆಟೋ ತಂಗುದಾಣ ಲೋಕಾರ್ಪಣೆ

admincoorgdaily

 ಟಿ.ಶೆಟ್ಟಿಗೇರಿಯಲ್ಲಿ ನೂತನ ಆಟೋ ತಂಗುದಾಣ ಲೋಕಾರ್ಪಣೆ
1002654780.jpg


ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಭಾಗಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಇಂದು ಭೇಟಿ ನೀಡಿದರು.

ಶಾಸಕರ ಅನುದಾನ ರೂ.10 ಲಕ್ಷದಲ್ಲಿ ಟಿ.ಶೆಟ್ಟಿಗೇರಿಯಲ್ಲಿ ನಿರ್ಮಿಸಲಾದ ನೂತನ ಆಟೋ ತಂಗುದಾಣವನ್ನು ಶಾಸಕರು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

ಬಳಿಕ ಮಾತನಾಡಿದ ಅವರು, ಕ್ಷೇತ್ರಾದ್ಯಂತ ಆಟೋ ಚಾಲಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದ ವತಿಯಿಂದ ಆಟೋ ತಂಗುದಾಣಗಳನ್ನು ನಿರ್ಮಿಸಲಾಗುತ್ತಿದೆ. ಬಿಸಿಲು, ಮಳೆಯ ಸಂದರ್ಭ ಚಾಲಕರಿಗೆ ಸುರಕ್ಷತೆ ಹಾಗೂ ಜನಸಾಮಾನ್ಯರಿಗೆ ಒಂದೆಡೆ ಆಟೋ ಸೇವೆ ಲಭ್ಯವಾಗಲು ಇದು ಅನುಕೂಲವಾಗಲಿದೆ. ಚಾಲಕರು ಜನಸಾಮಾನ್ಯರಿಗೆ ಹೊರೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ತಿತೀರ ಪ್ರಭು, ತಾಲೂಕು ಬಗರ್ ಹುಕುಂ ಅಧ್ಯಕ್ಷ ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ಮಾಜಿ ಜಿ.ಪಂ. ಸದಸ್ಯ ಕೆ.ಎಂ. ಬಾಲಕೃಷ್ಣ, ಡಿಸಿಸಿ ಸದಸ್ಯರಾದ ಚೊಟ್ಟೆಯಂಡಮಾಡ ವಿಶು, ಪೆಮ್ಮಂಡ ರಾಜ, ಮುಕಟೀರ ಸಂದೀಪ್, ಪಕ್ಷದ ಹಿರಿಯರು ತಿತೀರ ಮಂದಣ್ಣ, ಅಪ್ಪಚಂಗಡ ಮೋಟಯ್ಯ, ಅಲೆಮಾಡ ಸೋಮಣ್ಣ, ಚೊಟ್ಟೆಯಂಡಮಾಡ ಉದಯ, ಪಾಲ್ವಿನ್ ಪೂಣಚ್ಚ, ವಿಶ್ವನಾಥ್, ಮಾಣೀರ ವಿಜಯ ನಂಜಪ್ಪ, ಕಟ್ಟೇರ ವಿಶ್ವನಾಥ್, ಪ್ರವೀಣ್ ಪೊನ್ನಪ್ಪ, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.