Kodagu

ವಿರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘದಲ್ಲಿ ನೂತನ ಹೈಟೆಕ್ ಶೌಚಾಲಯ ಉದ್ಘಾಟನೆ

admincoorgdaily

ವಿರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘದಲ್ಲಿ ನೂತನ ಹೈಟೆಕ್ ಶೌಚಾಲಯ ಉದ್ಘಾಟನೆ
ವಿರಾಜಪೇಟೆ:ಇಲ್ಲಿನ ವಿರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತದ ಆವರಣದಲ್ಲಿ (ಮಹಿಳಾ ಸಮಾಜ)ದಲ್ಲಿ ನೂತನವಾಗಿ ನಿರ್ಮಿಸಲಾದ ಹೈಟೆಕ್ ಶೌಚಾಲಯದ ಉದ್ಘಾಟನೆ ಇತ್ತಿಚೆಗೆ ನಡೆಯಿತು.

   ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿವಂಗತ ಬಲ್ಯಾಟಂಡ ಮುದ್ದವ್ವನವರ ಕುಟುಂಬಸ್ಥರಾದ ಬಲ್ಯಾಟಂಡ ದೇವಿ ಪ್ರಸಾದ್ ಅವರು ನೂತನ ಹೈಟೆಕ್ ಶೌಚಾಲಯವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಬಲ್ಯಾಟಂಡ ದೇವಿ ಪ್ರಸಾದ್, "ಮಹಿಳಾ ಸಹಕಾರ ಸಂಘವು ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಾ ಬಂದಿದೆ. ಸಂಘಕ್ಕೆ ನಿತ್ಯವೂ ವಿವಿಧ ಕೆಲಸಗಳಿಗಾಗಿ ಆಗಮಿಸುವ ಸದಸ್ಯರು ಮತ್ತು ಮಹಿಳೆಯರ ಆರೋಗ್ಯ ಹಾಗೂ ಮೂಲಭೂತ ಸೌಕರ್ಯದ ದೃಷ್ಟಿಯಿಂದ ಇಂತಹ ಸ್ವಚ್ಛತೆಯಿಂದ ಕೂಡಿದ ಹೈಟೆಕ್ ಶೌಚಾಲಯದ ನಿರ್ಮಾಣ ಅತ್ಯಂತ ಶ್ಲಾಘನೀಯ ಹಾಗೂ ಅಗತ್ಯವಿರುವ ಕಾರ್ಯವಾಗಿದೆ. ಈ ಸಂಸ್ಥೆಯು ಮತ್ತಷ್ಟು ಎತ್ತರಕ್ಕೆ ಬೆಳೆದು ಮಹಿಳೆಯರಿಗೆ ಪ್ರಮುಖ ಆಸರೆಯಾಗಲಿ" ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಲ್ಯಾಟಂಡ ಕುಟುಂಬದ ಪ್ರಮುಖರಾದ ಪದ್ಮಾ ಗಣಪತಿ, ಕೌಶಿಕ್ ಕುಟ್ಟಯ್ಯ, ಅಭಿಷೇಕ್ ಬಿದ್ದಪ್ಪ ಹಾಗೂ ದೇವಯ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು.

   ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಪಟ್ರಪಂಡ ಗೀತಾ ಬೆಳ್ಯಪ್ಪ, ಉಪಾಧ್ಯಕ್ಷೆ ಬಿ.ಆರ್. ಸಬಿತಾ, ನಿರ್ದೇಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ. ಯಶೋಧ, ಎಚ್.ಆರ್. ಪುಷ್ಪವಾಸು, ಪುಷ್ಪ ಐತಪ್ಪ, ಮೆಟಿಲ್ಡಾ ಲೋಬೋ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಪುಷ್ಪಲತಾ ಸೇರಿದಂತೆ ಮಹಿಳಾ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.