ಅಹಿಂದ ಬಳಗ ಕೊಡಗು ಜಿಲ್ಲಾ ಸಮಿತಿಗೆ ನೂತನ ಪಧಾದಿಕಾರಿಗಳ ನೇಮಕ
admincoorgdaily

ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ ಅಹಿಂದ ಸಮುದಾಯದ ಸಂಘಟನೆ ಹಾಗೂ ಬಲವರ್ಧನೆಯ ಉದ್ದೇಶದಿಂದ ರಚನೆಗೊಂಡಿರುವ ಅಹಿಂದ ಬಳಗಕ್ಕೆ ನೂತನ ಪದಾಧಿಕಾರಿಗಳನ್ನು ಕೊಡಗು ಜಿಲ್ಲಾಧ್ಯಕ್ಷರಾದ ನಾಪಂಡ ಮುತ್ತಪ್ಪರವರ ಆದೇಶದ ಮೇರೆಗೆ ನೇಮಕ ಮಾಡಿಲಾಗಿದೆ.
ಉಪಾಧ್ಯಕ್ಷರಾಗಿ ಎಚ್.ಎಂ. ನಂದಕುಮಾರ್, ಬಿ.ಇ. ಜಯೇಂದ್ರ, ಬಾಪು ಮಾಯಾಮುಡಿ, ರಾಜೇಶ್ ವಿರಾಜಪೇಟೆ, ಅರುಣ್ ರಾವ್ ಹಾಗೂ ವಿಕ್ಟರ್ ಜಾನ್ಸನ್ ಆಯ್ಕೆಯಾಗಿದ್ದಾರೆ.
ಹಿರಿಯ ಸಲಹೆಗಾರರಾಗಿ ಕೆ.ಕೆ. ಮಂಜುನಾಥ್ ಕುಮಾರ್, ಕೆ.ಎಂ. ಯಾಕೂಬ್, ಆದಂ ಸೋಮವಾರಪೇಟೆ, ಕೋಯ ಹೊಸತೋಟ, ವೈ.ಟಿ. ಪರಮೇಶ್ ಹಾಗೂ ರಾಜಪ್ಪ ಮೆಣಸ ಬೆಟ್ಟ ಅವರನ್ನು ನೇಮಕ ಮಾಡಲಾಗಿದೆ.
ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಅಜ್ಜಳ್ಳಿ, ಅಬ್ಬಾಸ್ ಶನಿವಾರಸಂತೆ, ಮುದ್ದು ರಾಜ್ ಮಡಿಕೇರಿ, ನಿತೀಶ್ ಗೋಣಿಕೊಪ್ಪ, ರಜನಿಕಾಂತ್ ವಿರಾಜಪೇಟೆ ಹಾಗೂ ಅಶೋಕ್ ಗೋಪಾಲಪುರ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಕೆ.ಎಂ. ಸೈಯದ್ ಬಾವ ಹಾಗೂ ಅಶ್ರಫ್ ಕುಶಾಲನಗರ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಪ್ರಿತುನ್ ಪೂವಣ್ಣ ಅಯ್ಯನೆರವಂಡ ಹಾಗೂ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಸುಪ್ರೀತ ನೀರುಗುಂದ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಮಂಜು ಕೂಡಿಗೆ, ವಿಜಿ ಅಳುವಾರ, ಆನಂದ್ ರಾಜ್ ತಣ್ಣೀರುಹಳ್ಳ, ಯೇಸು ಬಸವನಹಳ್ಳಿ, ರಾಜಶೇಖರ ಶನಿವಾರಸಂತೆ, ಜಗದೀಶ್ ಕೊಡ್ಲಿಪೇಟೆ, ಜೆ.ಆರ್. ಪಾಲಾಕ್ಷ, ಯೋಗೇಶ್ ಚೆನ್ನಯ್ಯನಕೋಟೆ, ದಾಮೋದರ ಮಾದಾಪಟ್ಟಣ, ಹೊನ್ನಪ್ಪ ಚೌಡ್ಲು, ಚಂದು ಸಬ್ಬನ್ ಕೊಪ್ಪ, ದಾಮೋದರ ಬೆಳಕಿಕೊಪ್ಪ ಹಾಗೂ ರತನ್ ಹಾನಗಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.
ಮುಂದಿನ ಹಂತದಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿಯೂ ಸಮಿತಿಗಳನ್ನು ರಚಿಸಲಾಗುವುದೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.