ಮಕ್ಕಳ ಆಟೋಟಕ್ಕೆ ನೂತನ ಮೈದಾನ;ಬಾಳಲೆಯಲ್ಲಿ ಶಾಸಕ ಪೊನ್ನಣ್ಣರಿಂದ ಲೋಕಾರ್ಪಣೆ
admincoorgdaily

ಪೊನ್ನಂಪೇಟೆ: ತಾಲೂಕು ಬಾಳಲೆ ಗ್ರಾಮಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಇಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ತಾವು ನೀಡಿದ ₹25 ಲಕ್ಷ ವಿಶೇಷ ಅನುದಾನದಲ್ಲಿ ಪೂರ್ಣಗೊಂಡ ಈ ಭಾಗದ ಜಿ.ಎಂ.ಪಿ ಶಾಲೆಯ ನೂತನ ಶಾಲಾ ಮೈದಾನವನ್ನು ಲೋಕಾರ್ಪಣೆಗೊಳಿಸಿ ಶುಭ ಕೋರಿದರು.
ಈ ಹಿಂದೆ ಶಾಲಾ ಅಭಿವೃದ್ಧಿ ಸಮಿತಿಯವರು ಹಾಗೂ ಸ್ಥಳೀಯ ಪ್ರಮುಖರು ಇಲ್ಲಿಯ ಮಕ್ಕಳಿಗೆ ಕ್ರೀಡಾಭ್ಯಾಸ ಮಾಡಲು ಉತ್ತಮ ಮೈದಾನ ನಿರ್ಮಿಸಿ ಕೊಡುವಂತೆ ಮನವಿ ಮಾಡಿದ್ದರು. ಅದರಂತೆ ಶಾಸಕರು ವಿಶೇಷ ಕಾಳಜಿಯಿಂದ ಶಾಲಾ ಮೈದಾನಕ್ಕೆ ಅನುದಾನ ಒದಗಿಸಿದ್ದು, ಈಗ ಪೂರ್ಣಗೊಂಡ ಮೈದಾನ ಕಾಮಗಾರಿಯಿಂದಾಗಿ ಮಕ್ಕಳ ಆಟೋಟಕ್ಕೆ ಅನುಕೂಲವಾಗಲಿದೆ ಎಂದು ಬಣ್ಣಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಭಾಗಮಂಡಲ ಹಾಗೂ ತಲಕಾವೇರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಾನಂಡ ಪ್ರತ್ಯು, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ವಲಯ ಅಧ್ಯಕ್ಷ ಕೋದಂಡ ಸೋಮಣ್ಣ, ಪಂಚಾಯತ್ ಮಾಜಿ ಸದಸ್ಯ ವಿನು ಉತ್ತಪ್ಪ, ನಿಟ್ಟೂರು ವಲಯ ಅಧ್ಯಕ್ಷ ಪವನ್ ಚಿಟ್ಟಿಯಪ್ಪ, ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಬಾಳೆಯಡ ಸುಬ್ರಮಣಿ, ಪಕ್ಷದ ಮುಖಂಡರುಗಳಾದ ಸುಬ್ಬಯ್ಯ, ತಾರಾ ಅಯ್ಯಮ್ಮ, ಚೋಂದಮ್ಮ, ಕುಂಡಚ್ಚಿರ ಮಂಜು ದೇವಯ್ಯ, ವಿಕಾಸ್, ಅಕ್ಬರ್, ಗಣೇಶ್, ಅಪ್ಪಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.