ಕಾನೂರು ಭಾಗದಲ್ಲಿ 5 ಕೋಟಿ ವೆಚ್ಚದ ನೂತನ ರಸ್ತೆ ಲೋಕಾರ್ಪಣೆ
admincoorgdaily

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕು ಕಾನೂರು ಭಾಗಕ್ಕೆ ಇಂದು ಭೇಟಿ ನೀಡಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು, 5 ಕೋಟಿ 30 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
ಪೊನ್ನಂಪೇಟೆ-ಬೆಕ್ಕೆಸೊಡ್ಲೂರು-ಕಾನೂರು-ಬ್ರಹ್ಮಗಿರಿ-ನಿಟ್ಟೂರು ಸಂಪರ್ಕಿಸುವ ಈ ರಸ್ತೆಯು ಹಲವಾರು ಸಮಯದಿಂದ ನೆನೆಗುದಿಗೆ ಬಿದ್ದಿತ್ತು. ಸಾರ್ವಜನಿಕರ ಕೋರಿಕೆ ಮೇರೆಗೆ ವಿಶೇಷ ಅನುದಾನ ಒದಗಿಸಿ ರಸ್ತೆ ನಿರ್ಮಿಸಿ ಕೊಡಲಾಗಿದೆ ಎಂದು ಶಾಸಕರು ತಿಳಿಸಿದರು.
ಸಾರ್ವಜನಿಕ ಸ್ವತ್ತನ್ನು ನಮ್ಮ ಸ್ವತ್ತೆಂದು ಭಾವಿಸಿ ಕಾಪಾಡಿಕೊಳ್ಳಬೇಕು ಮತ್ತು ಈ ರಸ್ತೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಹಿರಿಯರಾದ ಮುಕಳೇರ ಕುಶಾಲಪ್ಪ, ವಲಯ ಅಧ್ಯಕ್ಷ ರಮೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಮಾಜಿ ಜಿ.ಪಂ. ಸದಸ್ಯ ಬಾನಂಡ ಪ್ರತ್ಯು, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪದವಿ ಧನ್ಯ, ಪಂಚಾಯಿತಿ ಸದಸ್ಯ ಬೋಪಣ್ಣ, ಮುಖಂಡರುಗಳಾದ ಕೇಚಮಾಡ ಸಿದ್ದು ನಾಚಪ್ಪ, ಮಾಚಮಾಡ ಮನು, ನಿಖಿಲ್, ಸೋಮಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.