ಬೇಟೋಳಿಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2,131ನೇ ಮದ್ಯವರ್ಜನ ಶಿಬಿರದ ನವಜೀವನೋತ್ಸವ
admincoorgdaily

ವಿರಾಜಪೇಟೆ: ತಾಲೂಕಿನ ಬೇಟೋಳಿಯ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ 2,131ನೇ ಮದ್ಯವರ್ಜನ ಶಿಬಿರದ 'ನವಜೀವನೋತ್ಸವ' ಹಾಗೂ ನವಜೀವನ ಸಮಿತಿ ರಚನಾ ಕಾರ್ಯಕ್ರಮವು ಧಾರ್ಮಿಕ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಇತ್ತೀಚೆಗೆ ನಡೆದ ಈ ಮದ್ಯವರ್ಜನ ಶಿಬಿರದಲ್ಲಿ ಮದ್ಯಪಾನ ತ್ಯಜಿಸಿ ನವಜೀವನಕ್ಕೆ ಕಾಲಿರಿಸಿದ ಶಿಬಿರಾರ್ಥಿಗಳನ್ನು ಒಳಗೊಂಡಂತೆ ನೂತನ 'ನವಜೀವನ ಸಮಿತಿ'ಯನ್ನು ರಚಿಸಲಾಯಿತು.
ಕಾರ್ಯಕ್ರಮದಲ್ಲಿ 2,131ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷರಾದ ಜೇಮ್ಸ್, ಗೌರವಾಧ್ಯಕ್ಷರಾದ ಲಕ್ಷ್ಮಿ ಶಶಿಕಾಂತ್, ಕೋಶಾಧಿಕಾರಿ ಸುಮನ ಪ್ರವೀಣ್, ಗೋಣಿಕೊಪ್ಪ ವೈದ್ಯಾಧಿಕಾರಿ ಡಾ. ಕೆ.ಕೆ. ಶಿವಪ್ಪ, ಉಡುಪಿ ಪ್ರಾದೇಶಿಕ ಕಚೇರಿಯ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ತಾಲೂಕು ಯೊಜನಾಧಿಕಾರಿ ಹರೀಶ್ ಪಿ. ಹಾಗೂ ಶಿಬಿರಾಧಿಕಾರಿ ದೇವಿಪ್ರಸಾದ್ ಉಪಸ್ಥಿತರಿದ್ದರು.
ಅಲ್ಲದೆ, ಶಿಬಿರಾರ್ಥಿಗಳು ಮತ್ತು ಅವರ ಕುಟುಂಬದವರು, ಅಮ್ಮತ್ತಿ ವಲಯದ ಮೇಲ್ವಿಚಾರಕರಾದ ಧನೇಶ್, ವಿರಾಜಪೇಟೆ ವಲಯದ ಮೇಲ್ವಿಚಾರಕರಾದ ಶಿವಕುಮಾರ್, ತಾಲೂಕಿನ ಎಲ್ಲಾ ಪೋಷಕರು ಹಾಗೂ ವಿರಾಜಪೇಟೆ ವಲಯದ ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಶಿಬಿರಾರ್ಥಿಗಳು ಮದ್ಯಪಾನದಿಂದ ಮುಕ್ತರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತ ಹಾಗೂ ನೆಮ್ಮದಿಯ ಜೀವನ ನಡೆಸಲು ನವಜೀವನ ಸಮಿತಿಯು ಮಾರ್ಗದರ್ಶನ ನೀಡಲಿದೆ ಎಂದು ಈ ಸಂದರ್ಭದಲ್ಲಿ ಸಂಘಟಕರು ತಿಳಿಸಿದರು.