ನಂ.11272 ನೇ ಮಾವೇಲಿ ಸಹಕಾರ ಸಂಘದ ಮಹಾಸಭೆ
admincoorgdaily

ಕುಶಾಲನಗರ : ನಂ 11272 ನೇ ಮಾವೇಲಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಪ್ರಥಮ ಮಹಾಸಭೆ ಸಂಘದ ಅಧ್ಯಕ್ಷರಾದ ಪಿ ರವೀಂದ್ರನ್ ಅಧ್ಯಕ್ಷತೆಯಲ್ಲಿ ಭಾನುವಾರ ಕೇರಳ ಸಮಾಜ ಕಟ್ಟಡದ ಸಭಾಂಗಣದಲ್ಲಿ ನಡೆಯಿತು .ಸಭೆಯಲ್ಲಿ ಮೃತಪಟ್ಟ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು.
ಇಂದಿನ ಸಭೆಗೆ ನೀಡಿರುವ ಆಹ್ವಾನ ಪತ್ರಿಕೆ ಓದಿ ಅಂಗೀಕರಿಸಲಾಯಿತು ,ಕಳೆದ ಮಹಾಸಭೆಯ ವರದಿಯನ್ನು ಓದಿ ದಾಖಲು ಮಾಡಲಾಯಿತು ,2025-26 ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಓದಿ ದಾಖಲು ಮಾಡಲಾಯಿತು ,2025 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಜಮಾ-ಖರ್ಚು ಲಾಭ - ನಷ್ಟದ ತಖ್ತೆ ಮತ್ತು ಆಸ್ತಿ ಜವಾಬ್ದಾರಿಯನ್ನು ಪರಿಶೀಲನೆ ಅಂಗೀಕರಿಸಲಾಯಿತು.
ಈ ಸಾಲಿನ ನಿವ್ವಳ ಲಾಭದ ವಿಲೇವಾರಿಯನ್ನು ಹಾಗೂ ಅಂದಾಜು ಬಡ್ಜೆಟ್ ಮಂಜೂರು ಮಾಡಲಾಯಿತು .ಮುಂಬರುವ ವರ್ಷಕ್ಕಾಗಿ ಸಮಿತಿಯು ತಯಾರಿಸಿದ ಚಟುವಟಿಕೆ ಬಗ್ಗೆ ಅನುಮೋದನೆಯನ್ನು ಪಡೆಯಲಾಯಿತು. ಸಂಘದ ಅಧ್ಯಕ್ಷರಾದ ಪಿ.ರವೀಂದ್ರನ್ ಮಾತನಾಡಿ ಸಂಘದ ಸದಸ್ಯತ್ವ 31-3-2025 ಅಂತ್ಯಕ್ಕೆ 478 ಎ ತರಗತಿ ಸದಸ್ಯರಿದ್ದು 2025-26 ನೇ ವರದಿ ಸಾಲಿನ ಅಂತ್ಯಕ್ಕೆ 520 ಎ ತರಗತಿ ಸದಸ್ಯರಿದ್ದು .ಒಟ್ಟು ರೂ 15,54,500/- ಪಾಲು ಬಂಡವಾಳ ಇದ್ದು .ಕಳೆದ ಸಾಲಿಗಿಂತ 3,04,000 ರೂ ಹೆಚ್ಚಾಗಿದೆ ನಮ್ಮ ಸಂಘದ ನೂತನ ಆಡಳಿತ ಅಧಿಕಾರಕ್ಕೆ ಬಂದ 5 ತಿಂಗಳ ಅವಧಿಯಲ್ಲಿ ಸಂಘ 6 ಲಕ್ಷ ಲಾಭದಲ್ಲಿದೆ .
ಸಂಘದ ಸದಸ್ಯರುಗಳಿಗೆ ಜಾಮೀನು ಸಾಲ ,ಪಿಗ್ಮಿ ಸಾಲ ನೀಡುತ್ತಿದ್ದು ವಾಯಿದೆಗೆ ಮುಂಚಿತವಾಗಿ ಸಾಲ ಮರುಪಾವತಿ ಮಾಡಿದ ಸದಸ್ಯರುಗಳಿಗೆ ಮರುದಿನವೇ ಸಾಲವನ್ನು ಮಂಜೂರು ಮಾಡುತ್ತಿದ್ದು.ಸದಸ್ಯರಿಗೆ ಈಗ ಹಾಲಿ ಜಾಮೀನು ಸಾಲದ ಮೊತ್ತ 1,50,000/_ ನೀಡುತ್ತಿದ್ದು. ಪಿಗ್ಮಿ ಸಾಲವು ಪಿಗ್ಮಿ ಹಣದ ಮೂರು ಪಟ್ಟು ಅಥವಾ 5.00 ಲಕ್ಷಕ್ಕಿಂತ ಮೀರದಂತೆ ಸಾಲದ ಮೀತಿ ಇರುತ್ತದೆ ಎಂದರು.ಸಂಘದ ಮಹಾಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷರಾದ ಎಂ.ಜಿ.ಪ್ರಕಾಶ್ ,ನಿರ್ದೇಶಕರಾದ ಎ.ಕೆ.ಶೇಖರನ್ ,ಎನ್.ಎ.ಸುಶೀಲ ,ಕೆ.ಜಿ.ಅಶೋಕ್ ,ಎಂಡಿ.ರಂಜಿತ್ ಕುಮಾರ್,ಎಂ.ಎಸ್.ಶಾಂತಿ ,ಕೆ.ವರದ,ಟಿ.ಕೆ.ಅಜಿತ್ ,ವಿ.ಎಸ್.ಜಿತೇಶ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎಂ.ಸವಿತ ಇದ್ದರು.