ನೊಣವಿನಕೆರೆ ಅಜ್ಜಯ್ಯ ರವರ ಆಶೀರ್ವಾದ ಪಡೆದ ಶಾಸಕ ಡಾ. ಮಂತರ್ ಗೌಡ
admincoorgdaily

ಬೆಂಗಳೂರು: ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧಿಯ ಪುಣ್ಯಕ್ಷೇತ್ರವಾದ ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಇಂದು ಬೆಂಗಳೂರಿನಲ್ಲಿ ಭಕ್ತಿಪೂರ್ವಕವಾಗಿ ಭೇಟಿ ಮಾಡಿ, ದಿವ್ಯ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.
ಪರಮಪೂಜ್ಯ ಅಜ್ಜಯ್ಯನವರ ಸಾನ್ನಿಧ್ಯದಲ್ಲಿ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ ಶಾಸಕರು, ಶ್ರೀಗಳ ಆಶೀರ್ವಚನ ಹಾಗೂ ಅನುಗ್ರಹವನ್ನು ಪಡೆದರು. ಈ ಸಂದರ್ಭದಲ್ಲಿ ಶ್ರೀಗಳ ಸಾನ್ನಿಧ್ಯ ಹಾಗೂ ಆಶೀರ್ವಾದವು ಮನಸ್ಸಿಗೆ ಅಪಾರವಾದ ಶಾಂತಿ, ಭಕ್ತಿ ಮತ್ತು ಧೈರ್ಯವನ್ನು ನೀಡಿದ ಅಮೃತ ಕ್ಷಣಗಳಾಗಿವೆ ಎಂದು ಡಾ. ಮಂತರ್ ಗೌಡ ಅವರು ಭಕ್ತಿಭಾವದಿಂದ ಹಂಚಿಕೊಂಡರು.