Kodagu

ಕೊಡಗಿನಲ್ಲಿ 19,507 ಮತದಾರರಿಗೆ ನೋಟಿಸ್ ವಿತರಣೆ

admincoorgdaily

ಕೊಡಗಿನಲ್ಲಿ 19,507 ಮತದಾರರಿಗೆ ನೋಟಿಸ್ ವಿತರಣೆ
ಮಡಿಕೇರಿ, ಸೆ. 5: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಅಂಗವಾಗಿ ಒಟ್ಟು 58,893 ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.

ಜಿಲ್ಲೆಯ ಇಬ್ಬರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಈ ಕಾರ್ಯ ಕೈಗೊಂಡಿದ್ದಾರೆ.

ಕ್ಷೇತ್ರವಾರು ವಿವರ: 208-ಮಡಿಕೇರಿ ಕ್ಷೇತ್ರದಲ್ಲಿ 9,252 Anomalies ಹಾಗೂ 9,533 No Mapping ಸೇರಿ ಒಟ್ಟು 18,785 ಮತದಾರರಿಗೆ, 209-ವಿರಾಜಪೇಟೆ ಕ್ಷೇತ್ರದಲ್ಲಿ 26,558 Anomalies ಹಾಗೂ 13,550 No Mapping ಸೇರಿ 40,108 ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಒಟ್ಟು 35,810 Anomalies ಮತ್ತು 23,083 No Mapping ಪ್ರಕರಣಗಳಿವೆ.

ವಿಚಾರಣೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಒಟ್ಟು 73 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ದಿನಾಂಕ 05-09-2026ಕ್ಕೆ ಇದ್ದಂತೆ ಈ ಕೆಳಕಂಡಂತೆ ನೋಟಿಸ್ Generate ಹಾಗೂ Deliver ಮಾಡಲಾಗಿದೆ.

ನೋಟಿಸ್ ವಿತರಣೆ ಪ್ರಗತಿ: ಒಟ್ಟು 58,884 ನೋಟಿಸ್ ಗಳಲ್ಲಿ 58,883 ನೋಟಿಸ್ Generate ಆಗಿದ್ದು, ಬಾಕಿ 0 ಇದೆ. ಇದರಲ್ಲಿ 19,507 ನೋಟಿಸ್ ವಿತರಣೆಯಾಗಿದ್ದು, 39,376 ನೋಟಿಸ್ ವಿತರಣೆ ಬಾಕಿ ಇದೆ. ಮಡಿಕೇರಿ ಕ್ಷೇತ್ರದಲ್ಲಿ 11,201 ಹಾಗೂ ವಿರಾಜಪೇಟೆಯಲ್ಲಿ 28,175 ನೋಟಿಸ್ ವಿತರಣೆ ಬಾಕಿ ಇದೆ.