ಕೊಡಗಿನಲ್ಲಿ 58,893 ಮತದಾರರಿಗೆ ನೋಟಿಸ್: 31,247 ನೋಟಿಸ್ ವಿತರಣೆ ಪೂರ್ಣ
admincoorgdaily

ಮಡಿಕೇರಿ, ಸೆ.7: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಹಿನ್ನೆಲೆಯಲ್ಲಿ ಒಟ್ಟು 58,893 ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಈ ಪೈಕಿ 31,247 ನೋಟಿಸ್‌ಗಳನ್ನು ವಿತರಿಸಲಾಗಿದೆ.
ಜಿಲ್ಲಾಡಳಿತದಿಂದ ಮಾಹಿತಿ ನೀಡಿದ್ದು, 208-ಮಡಿಕೇರಿ ಕ್ಷೇತ್ರದಲ್ಲಿ 18,785 ಹಾಗೂ 209-ವಿರಾಜಪೇಟೆ ಕ್ಷೇತ್ರದಲ್ಲಿ 40,108 ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ Anomalies ಮತ್ತು No Mapping ಪ್ರಕರಣಗಳು ಸೇರಿವೆ.
ನೋಟಿಸ್ ವಿತರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು 73 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸೆ.7 ರವರೆಗಿನ ಪ್ರಗತಿ:
ಒಟ್ಟು 58,884 ನೋಟಿಸ್‌ಗಳಲ್ಲಿ 58,883 ನೋಟಿಸ್ ಜನರೇಟ್ ಆಗಿದೆ. 31,247 ನೋಟಿಸ್‌ಗಳು ಫಲಾನುಭವಿಗಳಿಗೆ ತಲುಪಿದ್ದು, 27,636 ನೋಟಿಸ್ ವಿತರಣೆ ಬಾಕಿ ಇದೆ. ಮಡಿಕೇರಿ ಕ್ಷೇತ್ರದಲ್ಲಿ 10,874 ಮತ್ತು ವಿರಾಜಪೇಟೆಯಲ್ಲಿ 20,373 ನೋಟಿಸ್‌ಗಳನ್ನು ವಿತರಿಸಲಾಗಿದೆ.