Kodagu

ಮಾದಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಎನ್.ಎಸ್ಎಸ್ ಶಿಬಿರ

admincoorgdaily

ಮಾದಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಎನ್.ಎಸ್ಎಸ್ ಶಿಬಿರ
ಸೋಮವಾರಪೇಟೆ: ಯುವಜನಾಂಗವು ಡ್ರಗ್ಸ್ ಅಥವಾ ಮಾದಕ ದ್ರವ್ಯಗಳ ಬಳಕೆಯನ್ನು ತ್ಯಜಿಸುವುದು ಎಂದರೆ  ತಮ್ಮ ಜೀವನವನ್ನು ಮರಳಿ ಪಡೆಯಲು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಡಬಹುದಾದ ಅತ್ಯಂತ ಪ್ರಮುಖವಾದ ಹೆಜ್ಜೆಯಾಗಿದೆ ಎಂದು ಜಿಲ್ಲಾ ಪೋಲಿಸ್ ಇಲಾಖೆಯ ವಿಶೇಷ ಬಾಲಾಪರಾಧಿ ಪೋಲಿಸ್ ಘಟಕದ ಮಕ್ಕಳ ಕಲ್ಯಾಣ ವಿಭಾಗದ ಸಹಾಯಕ ಪೋಲಿಸ್ ಅಧಿಕಾರಿಯೂ ಆದ ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಮಹಿಳಾ ಪೋಲಿಸ್ ಅಧಿಕಾರಿ
ಎಂ.ಬಿ.ಸುಮತಿ ಹೇಳಿದರು.

    ತಾಲ್ಲೂಕಿನ ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ 
 ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ಕಾಲ ಹಮ್ಮಿಕೊಂಡಿರುವ  
ವಾರ್ಷಿಕ ವಿಶೇಷ ಶಿಬಿರದಲ್ಲಿ "ಮಾದಕ ದ್ರವ್ಯದ ದುಷ್ಪರಿಣಾಮಗಳು ಮತ್ತು ರಸ್ತೆ ಸುರಕ್ಷತೆ" ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು,
ಯುವಜನಾಂಗವು ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಮತ್ತು ಉತ್ತಮ ಭವಿಷ್ಯ ಆಯ್ಕೆ ಮಾಡಿಕೊಳ್ಳಬೇಕು ಎಂದರು.

    ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾತನಾಡಿದ ಅವರು, ಹದಿಹರೆಯದವರು ಮತ್ತು ಯುವಕರಲ್ಲಿ ಮಾದಕ ವಸ್ತುಗಳ ಬಳಕೆಯು ಅವರ ಶಿಕ್ಷಣ ಹಾಗೂ ವೃತ್ತಿಜೀವನವನ್ನು ಹಾಳುಮಾಡುತ್ತದೆ.
ಮಾದಕ ವ್ಯಸನವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾನಿಗೊಳಿಸುವ ಒಂದು ಗಂಭೀರ ಕಾಯಿಲೆಯಾಗಿದೆ.
 ಆದ್ದರಿಂದ, ಯುವಜನಾಂಗವು ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಡಲು 
 ಎಂದರು.

ಮಾದಕ ದ್ರವ್ಯಗಳ ಮುಕ್ತ ಜೀವನ ಮತ್ತು ಜವಾಬ್ದಾರಿಯುತ ವಾಹನ ಚಾಲನೆ" ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಒಂದು ಸಣ್ಣ ನಿರ್ಲಕ್ಷ್ಯವು ಅಮೂಲ್ಯವಾದ ಜೀವವನ್ನು ಬಲಿ ತೆಗೆದುಕೊಳ್ಳಬಹುದು. ಆದ್ದರಿಂದ, ಯುವ ಜನಾಂಗವು ಮಾದಕ ದ್ರವ್ಯಗಳಿಂದ ದೂರವಿದ್ದು, ರಸ್ತೆ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಸಮತಿ ಹೇಳಿದರು.

ರಸ್ತೆ ಸುರಕ್ಷತೆಯ ಸಾಮಾನ್ಯ ನಿಯಮಗಳ ಕುರಿತು ವಿವರಿಸಿದ ಸುಮತಿ ಅವರು,
 ಯಾವುದೇ ಕಾರಣಕ್ಕೂ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸಿ ವಾಹನ ಚಾಲನೆ ಮಾಡದೇ
ವ್ಯಸನಮುಕ್ತ ಚಾಲನೆ ಮಾಡಬೇಕು. ರಸ್ತೆಗಳಲ್ಲಿ ನಿಗದಿಪಡಿಸಿದ ವೇಗದ ಮಿತಿಯಲ್ಲೇ ವಾಹನ ಚಲಾಯಿಸಬೇಕು ಎಂದರು.

    ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ನಡತೆ, ಶಿಸ್ತು- ಸಂಯಮ, ಉತ್ತಮ ನಾಯಕತ್ವ ಹಾಗೂ ಸಮಯಪ್ರಜ್ಞೆಯನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸುಮತಿ ಹೇಳಿದರು.

    ಮಾದಕ ವಸ್ತುಗಳ ದುಷ್ಪರಿಣಾಮಗಳು ಕುರಿತು ಮಾತನಾಡಿದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಎ.ನಾಚಪ್ಪ, ವಿದ್ಯಾರ್ಥಿಗಳು
ಮಾದಕ ದ್ರವ್ಯಗಳ ಸೇವನೆಯಿಂದ ದೂರವಿದ್ದು, ಈ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದರು.

ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಎಂ. ಭರತ್ ಕುಮಾರ್ ಮಾತನಾಡಿ, ಯುವಕರು ಇಂತಹ ಶಿಬಿರದಿಂದ ಕಲಿತ ಉತ್ತಮ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

    ಶಿಬಿರಾಧಿಕಾರಿ ಎನ್.ಎನ್.ಮನೋಹರ್, ಉಪನ್ಯಾಸಕಿ ಕು.ಪ್ರಫುಲ್ಲ, ಶಾಲಾ ಶಿಕ್ಷಕರಾದ  ಪಿ.ಜೆ.ಗ್ರೇಸಿ, ಬಿ.ಎಸ್.ಅನಿತ, ಕೆ.ಭವಾನಿ,
ಅನ್ವರ್ ಪಾಷ,
ಸಬೀನ , ನೇತ್ರಾವತಿ , ಸಿಬ್ಬಂದಿ ಬಿ.ಎ.ಕಮಲ ಇತರರು ಇದ್ದರು.