ಎನ್.ಎಸ್.ಎಸ್ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯ
admincoorgdaily

ವಿರಾಜಪೇಟೆ;ನಾಯಕತ್ವ ಗುಣವನ್ನು ಬೆಳೆಸುವುದರೊಂದಿಗೆ ಸರ್ವರನ್ನು ಒಗ್ಗೂಡಿಸಿಕೊಂಡು ಮುಂದಕ್ಕೆ ಸಾಗುವ ಗುಣವನ್ನು ಬೆಳೆಸುವಲ್ಲಿ ಎನ್.ಎಸ್.ಎಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ ಜಿ ವೀಣಾ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಎನ್.ಎಸ್.ಎಸ್ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಎನ್.ಎಸ್.ಎಸ್ ವಿದ್ಯಾರ್ಥಿಗಳ ಜೀವನದಲ್ಲಿ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಶಿಸ್ತು, ಸಂಯಮ , ಸಹಕಾರ , ನಾಯಕತ್ವಗುಣ , ಸಮಯಪಾಲನೆಯಂತಹ ವಿಚಾರಗಳನ್ನು ಬೆಳೆಸುದರೊಂದಿಗೆ ಪರಿಸರ ಸಂರಕ್ಷಣೆ, ಗಿಡಗಳನ್ನು ನೆಡುದು , ಸ್ವಚ್ಛತಾ ಅಭಿಯಾನಗಳನ್ನು ನಡೆಸುವ ಮೂಲಕ ಜನಸಾಮಾನ್ಯರಲ್ಲು ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತದೆ. ನೀವು ಎನ್ ಎಸ್ ಎಸ್ ನಲ್ಲಿ ಕಲಿಯುವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಾಕೊಂಡು ಸಮಾಜದ ಏಳಿಗೆ ಸ್ವಯಂ ಸೇವೆ ಮಾಡಲು ಸದಾ ಸಿದ್ದರಾಗಿ ಎಂದರು.
ನಂತರ ಎಲ್ಲಾ ಉಪನ್ಯಾಸಕರ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ರಚಿಸಿ ಕಾಲೇಜಿನ ಆವರಣ ಹಾಗೂ ಕಾಲೇಜಿನ ಮುಂಭಾದ ರಸ್ತೆ ಇಕ್ಕೆಲಗಳಲ್ಲೂ ಇದ್ದ ಕಸವನ್ನು ಸಂಗ್ರಹಿಸಿ ಸ್ವಚ್ಛ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಎಲ್ ಆರ್ ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಮುಖ್ಯಸ್ಥ ಸೋಮಣ್ಣ, ಎನ್.ಎಸ್.ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್, ಸಮಿತಿ ಸದಸ್ಯರಾದ ಮಾಣಿಕ್ಯ, ಪವಿತ್ರ , ಲೋಚನ , ಉಪನ್ಯಾಸಕ ವರ್ಗ , ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.