ದಾರುನ್ನಜಾತ್ ನಲ್ಲಿ ನೂರುನ್ ಅಲಾ ನೂರ್ ಮೀಲಾದ್ ಕಾನ್ಫರೆನ್ಸ್ ಗೆ ಚಾಲನೆ
admincoorgdaily

ಸಿದ್ದಾಪುರ: ನೆಲ್ಯಹುದಿಕೇರಿಯ ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿಯಲ್ಲಿ ಸೆಪ್ಟೆಂಬರ್ 4 ರಿಂದ 6 ರವರೆಗೆ ನಡೆಯಲಿರುವ ನೂರುನ್ ಅಲಾ ನೂರ್ ಮೀಲಾದ್ ಕಾನ್ಫರೆನ್ಸ್ ಗೆ ಇಂದು ಚಾಲನೆ ನೀಡಲಾಯಿತು.
ಮೊದಲ ದಿನವಾದ ಇಂದು ಸಂಸ್ಥೆಯ ಖತೀಬರಾದ ಮುಮ್ಮುಟ್ಟಿ ಬಾಖವಿ ಉಸ್ತಾದ್ ನೇತೃತ್ವದಲ್ಲಿ ಪುಲ್ಕಿಮಾಡು ಮಖಾಂ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಜೆ 4 ಗಂಟೆಗೆ ಸೈಯದ್ ಮುತ್ತುಕೋಯ ತಂಗಳ್ ನೆಲ್ಯಹುದಿಕೇರಿ ಅವರು ಧ್ವಜಾರೋಹಣ ನೆರವೇರಿಸಿ ಭಕ್ತಿ ಪೂರ್ಣ ಪ್ರಾರ್ಥನೆ ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷ ಮಜೀದ್ ಸಿ.ಎಂ. ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಂಸ್ಥೆಯ ಸದರ್ ಉಸ್ತಾದ್ ಝೈನುದ್ದೀನ್ ಮುಸ್ಲಿಯಾರ್ ಉದ್ಘಾಟಿಸಿದರು. ಆಡಳಿತ ಮಂಡಳಿ ಸದಸ್ಯ ಹಸೈನಾರ್ ಸಖಾಫಿ ಉಸ್ತಾದ್ ಹಿತನುಡಿಗಳನ್ನಾಡಿದರು.
ಮೀಲಾದ್ ಕಾನ್ಫರೆನ್ಸ್ ಚೇರ್ಮನ್ ಸೈಯದ್ ಬಾವ ಸ್ವಾಗತ ಹಾಗೂ ವಂದನಾರ್ಪಣೆ ನೆರವೇರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶಾದ್ ಎಂ.ಎ., ಪ್ರಮುಖರಾದ ಅಬ್ದುಲ್ಲಾ, ಎನ್.ಎಂ. ಹಸನ್, ಅಶ್ರಫ್ ಸಿ.ಎ., ಉಮ್ಮರ್ ಎ.ಪಿ., ಅಬು, ಸಂಸ್ಥೆಯ ಅಧ್ಯಾಪಕರು, ಆಡಳಿತ ಮಂಡಳಿ ಸದಸ್ಯರು, ಮೀಲಾದ್ ಸಮಿತಿ ಸದಸ್ಯರು ಸೇರಿದಂತೆ ಪ್ರಮುಖರು ಹಾಜರಿದ್ದರು.