ತುಳುವಿಗೆ ಅಧಿಕೃತ ಸ್ಥಾನ; ಸರ್ಕಾರಕ್ಕೆ ಬಿಲ್ಲವ ಸಮಾಜ ನಾಪೋಕ್ಲು ಅಭಿನಂದನೆ
admincoorgdaily

ಬೆಂಗಳೂರು:ಕರ್ನಾಟಕದಲ್ಲಿ ತುಳು ಭಾಷೆಗೆ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ, ಬಿಲ್ಲವ ಸಮಾಜ ನಾಪೋಕ್ಲು (ರಿ) ವತಿಯಿಂದ ವಿಧಾನಸೌಧ, ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಎ.ಎಸ್. ಪೊನ್ನಣ್ಣ ಅವರನ್ನು ಸಮಾಜದ ವತಿಯಿಂದ ಗೌರವಿಸಿ, ಧನ್ಯವಾದಗಳನ್ನು ಸಲ್ಲಿಸಲಾಯಿತು. ಬಿಲ್ಲವ ಸಮಾಜ ನಾಪೋಕ್ಲು (ರಿ) ಅಧ್ಯಕ್ಷರಾದ ಶ್ರೀ ಬಿ.ಎಂ. ಪ್ರತೀಪ್ ಅವರ ನೇತೃತ್ವದ ನಿಯೋಗವು ಅಭಿನಂದನೆ ಸಲ್ಲಿಸಿತು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಬಿ.ಎಂ. ಪ್ರತೀಪ್ ಅವರು ನಾಪೋಕ್ಲುವಿನಲ್ಲಿ ಬಿಲ್ಲವ ಸಮಾಜದ ಸಮುದಾಯ ಭವನ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ಮತ್ತು ನೆರವು ನೀಡುವಂತೆ ಶ್ರೀ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಶ್ರೀ ಎ.ಎಸ್. ಪೊನ್ನಣ್ಣ ಅವರು, ಬಿಲ್ಲವ ಸಮಾಜ ನಾಪೋಕ್ಲುವಿನ ನಿಯೋಗಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಪ್ರು ರವೀಂದ್ರ, ಬಾಚಮಾಡ ಲವ ಚಿನ್ನಪ್ಪ, ಬಿಲ್ಲವ ಸಮಾಜ ನಾಪೋಕ್ಲು (ರಿ) ಅಧ್ಯಕ್ಷರಾದ ಬಿ.ಎಂ. ಪ್ರತೀಪ್, ಉಪಾಧ್ಯಕ್ಷರಾದ ಬಿ.ಎಂ. ವಸಂತ, ಜಗನ್ನಾಥ, ಪ್ರಧಾನ ಕಾರ್ಯದರ್ಶಿ ಲೋಹಿತ್ ಕೆ.ಎಸ್., ಮಹಿಳಾ ಘಟಕದ ಅಧ್ಯಕ್ಷರಾದ ರಮ್ಯ ಬಿ.ಎಸ್., ಸಂಘದ ಸದಸ್ಯರಾದ ಬಾಬು ಬಿ.ಎಸ್., ಪ್ರಕಾಶ ನಾಗರಾಜು,ವಿಠಲ ಬಿ.ಬಿ., ಧನಂಜಯ ಬಿ.ಜಿ., ಲವ ಬಿ.ಕೆ., ನಾರಾಯಣ ಬಿ.ಎಸ್., ಬಿ.ಬಿ. ನವೀನ್, ಕವಿತಾ ಬಿ.ಎ., ನಿರನ್ ಬಿ.ಡಿ. ಹಾಗೂ ಲಿಖಿತ್ ಕೆ.ಎಸ್. ಸೇರಿದಂತೆ ಸಮಾಜದ ಸದಸ್ಯರು ಉಪಸ್ಥಿತರಿದ್ದರು.