ಅಕ್ಟೋಬರ್ 20 ರಂದು ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವಿರಾಜಪೇಟೆ ಇವರ ವತಿಯಿಂದ 19 ನೇ ವರ್ಷದ ಅದ್ದೂರಿ ಆಯುಧಪೂಜಾ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ
admincoorgdaily

ವಿರಾಜಪೇಟೆ:ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವಿರಾಜಪೇಟೆ ಇವರ ಆಶ್ರಯದಲ್ಲಿ 19ನೇ ವರ್ಷದ ಅದ್ದೂರಿ ಆಯುಧ ಪೂಜಾ ಸಮಾರಂಭ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವು ಅಕ್ಟೋಬರ್ 20 ರಂದು ಮಂಗಳವಾರ ಜರುಗಲಿದೆ. ಈ ಕುರಿತು ವಿರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜೂಡಿವಾಸ್ ಅವರು ಮಾಹಿತಿಯನ್ನು ನೀಡಿದರು.
ಸಂಘದ ವತಿಯಿಂದ 19ನೇ ವರ್ಷದ ಆಯುಧಪೂಜೆ ಸಮಾರಂಭವನ್ನು ಆಚರಿಸಲಾಗುತ್ತಿದ್ದು ಅಂದು ಬೆಳಿಗ್ಗೆ 10:00ಗೆ ಸಂಘದ ಕಚೇರಿಯಲ್ಲಿ ಆಯುಧ ಪೂಜೆ 10.30 ಗಂಟೆಗೆ ಸ್ಥಳೀಯ ಕಲಾ ಪ್ರತಿಭೆಗಳು ಹಾಗೂ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಗುಂಪು ನೃತ್ಯ ಹಾಗೂ ಸ್ಥಳೀಯ ಚಂಡೆ ಮೇಳ ಮುಂತಾದ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 1:00ಗೆ ಸಾರ್ವಜನಿಕರಿಗೆ ಸಂಘದ ವತಿಯಿಂದ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಪ್ರಖ್ಯಾತ ಬೈಕ್ ಸವಾರರಿಂದ ಸಾಹಸ ಪ್ರದರ್ಶನ ಜರುಗಲಿದೆ. ಸ್ಥಳೀಯ ಕಲ ಪ್ರತಿಭೆಗಳಿಗೂ ಕೂಡ ಈ ಸಂದರ್ಭದಲ್ಲಿ ಅವಕಾಶವನ್ನು ನೀಡಲಾಗುವುದು ಎಂದರು.
ಸಂಜೆ ಸಮಾರೋಪ ಸಮಾರಂಭವು ಜರುಗಲಿದ್ದು ಅದರಲ್ಲಿ ಬಹುಮಾನ ವಿತರಣೆ, ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಹಿರಿಯರು, ಪೌರಕಾರ್ಮಿಕರು, ಸಮಾಜ ಸೇವಕರು, ನಿವೃತ್ತ ಬಸ್ ಕಾರ್ಮಿಕರು ಹಾಗೂ ಪ್ರತಿಭಾವಂತ ಬಸ್ ಕಾರ್ಮಿಕರ ಮಕ್ಕಳಿಗೆ ಸನ್ಮಾನವನ್ನು ಮಾಡಿ ಗೌರವಿಸಲಾಗುವುದು. ತದನಂತರ ಕ್ಯಾಲಿಕಟ್ ನ ಪ್ರಖ್ಯಾತ ಸರ್ಗಂ ಸಂಗೀತ ಹಾಗೂ ಮ್ಯಾಜಿಕ್ ಡ್ಯಾನ್ಸ್ ಕಾರ್ಯಕ್ರಮವು ಜರುಗಲಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ, ದಿನೇಶ್ ನಾಯರ್ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾ ಪ್ರತಿಭೆಗಳು ಹೆಸರನ್ನು ವಿರಾಜಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಜವಾನ್ ಕೋಲ್ಡ್ ಸ್ಟೋರೇಜ್ ಅಥವಾ ಸಂಘದ ಪದಾಧಿಕಾರಿಗಳಲ್ಲಿ ನೋಂದಾಯಿಸತಕ್ಕದ್ದು. ಆಯುಧ ಪೂಜಾ ಕಾರ್ಯಕ್ರಮ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಹೇಳಿದರು.
ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದರು.9844558535, 8762279397, 8310181094.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಜಾಂಚಿ ವಿನಂತು ಬಿ .ವಿ ಹಾಗೂ ನಿರ್ದೇಶಕರಾದ ಅಜಯ್ ಕೆ ಇ. ಉಪಸ್ಥಿತರಿದ್ದರು.