Kodagu

ಶನಿವಾರಸಂತೆ;ಗುಡುಗಳಲೆ ತಿರುವಿನಲ್ಲಿ ಸಿಮೆಂಟ್ ಲಾರಿ ಪಲ್ಟಿ - ಚಾಲಕ ಪ್ರಾಣಾಪಾಯದಿಂದ ಪಾರು

admincoorgdaily

ಶನಿವಾರಸಂತೆ;ಗುಡುಗಳಲೆ ತಿರುವಿನಲ್ಲಿ ಸಿಮೆಂಟ್ ಲಾರಿ ಪಲ್ಟಿ - ಚಾಲಕ ಪ್ರಾಣಾಪಾಯದಿಂದ ಪಾರು
ಶನಿವಾರಸಂತೆ;ಸಮೀಪದ ಗುಡುಗಳಲೆ-ಅರಕಲಗೂಡು ತೆರಳುವ ಗುಡುಗಳಲೆ ಬೆಳ್ಳರಳ್ಳಿ ತಿರುವಿನಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಮಂಗಳವಾರ ಬೆಳಗ್ಗೆ ಮಗುಚಿದ್ದು, ಲಾರಿಯಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ನುಜ್ಜುಗುಜ್ಜಾಗಿದೆ.

ಬೆಂಗಳೂರುವಿನಿಂದ ಶನಿವಾರಸಂತೆಗೆ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಲಾರಿ ಇದಾಗಿದ್ದು, ಈ ತಿರುವಿನಲ್ಲಿ ಆಗಿಂದಾಗ್ಗೆ ಲಾರಿಗಳು ಮಗುಚುತ್ತಿದ್ದು, ಅರಕಲಗೂಡು ಭಾಗದಿಂದ ಬರುವಾಗ ಇಳಿಜಾರು ರಸ್ತೆ ಇದಾಗಿದ್ದು ಇದರಿಂದ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.