ಸುಂಟಿಕೊಪ್ಪದಲ್ಲಿ ಸಡಗರ ಸಂಭ್ರಮದಿಂದ ಜರುಗಿದ ಓಣಂ ಆಚರಣೆ
admincoorgdaily

ಸುಂಟಿಕೊಪ್ಪ;
ಹಿಂದೂ ಮಲಯಾಳಿ ಸಮಜದವರು ತಮ್ಮ ಮನೆ ಹಬ್ಬವಾದ ಓಣಂ ಹಬ್ಬವನ್ನು ಮೂಲ ಹಬ್ಬವಾಗಿಸಿ ಎಲ್ಲರೊಂದಿಗೆ ಬೆರೆತು ಸಂಭ್ರಮಿಸುವುದು ಸಮಾಜಕ್ಕೊಂದು ಮಾದರಿ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹೇಳಿದರು.
ಗದ್ದೆಹಳ್ಳದ ಎಸ್.ಎಸ್. ಇಂಟರ್ನ್ಯಾಷನಲ್ ಹಾಲ್ ನಲ್ಲಿ ಅಯೋಜಿತವಾಗಿದ್ದ ಸುಂಟಿಕೊಪ್ಪ ಮಲಯಾಳಿ ಸಮಾಜದ 19ನೇ ವರ್ಷದ ಓಣಂ ಆಚರಣೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಮಲಯಾಳಿ ಸಮಾಜದವರಿಗೆ ನಿವೇಶನ ಬೇಕೆಂಬ ಬೇಡಿಕೆ ಇದೆ. ಜಿಲ್ಲಾ ಮಟ್ಟದಲ್ಲಿ ನಿವೇಶನ ಗುರುತಿಸುವ ಕೆಲಸ ನಡೆದಿದ್ದು ಶಾಸಕರ ಅನುದಾನವನ್ನು ನೀಡಲಾಗುವುದೆಂದು ಭರವಸೆ ನೀಡಿದರು. ಸುಂಟಿಕೊಪ್ಪ ಮಲಯಾಳಿ ಸಮಾಜದವರು ಜಾಗ ಗುರುತಿಸಿದ್ದಲ್ಲಿ ಕಟ್ಟಡ ನಿರ್ಮಾಣಕ್ಕೂ ಸಹಕಾರ ನೀಡುವುದಾಗಿ ಅವರು ಹೇಳಿದರು.
ಮುಖ್ಯ ಅತಿಥಗಳಲ್ಲಿ ಒಬ್ಬರಾಗಿದ್ದ ಕೊಡಗು ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷರಾದ ವಿ.ಎಂ.ವಿಜಯನ್ ಮಾತನಾಡಿ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡುವುದರೊಂದಿಗೆ ಸಂಸ್ಕಾರಯುತ ಜೀವನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕೆಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾಡಳಿತ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಮಾತನಾಡಿ ಪ್ರತಿವರ್ಷವೂ ಸುಂಟಿಕೊಪ್ಪ ಮಲಯಾಳಿ ಸಮಾಜವು ಹಂತ ಹಂತವಾಗಿ ಬೆಳವಣಿಗೆ ಸಾಧಿಸಿದ್ದನ್ನು ನೋಡಿ ಸಂತೋಷಪಟ್ಟಿದ್ದೇನೆ. ಮುಂದಿನ ದಿನಗಳ್ಲೂ ಸಮಾಜವು ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹಾರೈಸಿದ ಅವರು ನಮ್ಮ ಸಮಾಜದಲ್ಲಿ ಹತ್ತು ಹಲವು ಜಾತಿ ಉಪಜಾತಿಗಳಿದ್ದು ಸಂಘಟನೆಯ ಮೂಲಕ ಅವರ ಅವರ ಸಮಾಜಕ್ಕೆ ಬೇಕಾಗುವ ಬೇಕು ಬೇಡಿಕೆಗಳನ್ನು ಸರಕಾರದ ಮುಂದೆ ಮಂಡಿಸಲು ಸಂಘಟನೆ ಬೇಕಾಗುತ್ತದೆ ಈ ನಿಟ್ಟಿನಲ್ಲಿ ಹಿಂದೂ ಮಲಯಾಳಿ ಸಮಾಜವು ತುಂಬಾ ಸಾಧನೆಯನ್ನು ಮಾಡಿದ್ದು ಸಮಾಜದ ಪ್ರತಿಭೆಗಳು ಹೋಬಳಿ ಮಟ್ಟದಿಂದ ಹಿಡಿದು ದೇಶ ವಿದೇಶಗಳಲ್ಲಿ ಕೂಡ ತಮ್ಮ ಸಾಧನೆಯ ಮೂಡಿಸಿರುವುದು ಹೆಮ್ಮೆಯ ವಿಚಾರವೆಂದು ಅವರು ಶ್ಲಾಘಿಸಿದರು. ಉದ್ಯಮಿ, ಸಮಾಜ ಸೇವಕರಾದ ಎಡಿಕೇರಿ ಪ್ರಸನ್ನ ಅವರು ಮಾತನಾಡಿ ಹಿಂದೂ ಮಲಯಾಳಿ ಸಮಾಜದ ಒಗ್ಗಟ್ಟು ಮತ್ತು ಸಂಘಟನೆ ಎಲ್ಲರಿಗೂ ಅನುಕರಣೀಯ ಮಾದರಿ ಎಂದು ಹೇಳಿದರು.
ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಕೆ. ವಾಸುದೇವ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಆರ್.ಸುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸುಂಟಿಕೊಪ್ಪ ಮಲಯಾಳಿ ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷೆ ಶೈಜಾ, ಕೊಡಗು ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಟಿ.ಕೆ. ಸುಧೀರ್, ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣನ್, ಕಾನೂನು ಸಲಹೆಗಾರ ಟಿ.ಆರ್.ವಾಸುದೇವ, ಸುಂಟಿಕೊಪ್ಪ ಮಲಯಾಳಿ ಸಮಾಜದ ಮಾಜಿ ಅಧ್ಯಕ್ಷರುಗಳಾದ ಪಿ.ಸಿ.ಮೋಹನ್, ವಿ.ಎ.ಸಂತೋಷ್, ರಮೇಶ್ಪಿಳ್ಳೆ, ಸುಂಟಿಕೊಪ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಮೂರ್ನಾಡು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಬಾಬು ಉಪಸ್ಥಿತರಿದ್ದರು. ಆಶ್ವಿಧಿ ಕಮಲಾಸನ್ ಪ್ರಾರ್ಥಿಸಿ, ಚಿತ್ರ ಸುರೇಶ್ ಸ್ವಾಗತಿಸಿ, ಜ್ಯೋತಿ ನಿರೂಪಿಸಿದರು. ದಿನದ ಅಂಗವಾಗಿ ಓಣಂ ಸದ್ಯ ಹಾಗೂ ಸಾಂಸ್ಕೃತಿಕ ಕಾರ್ಯಕರ್ಮ ನಡೆಯಿತು.
ಸುಂಟಿಕೊಪ್ಪ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ಕೆ.ಕಮಲಾಸನ್ ವಿ.ಕೆ.ರಾಜು, ವೇಲಾಯುಧನ್, ಶಶಿಕುಮಾರ್, ಟಿ.ಕೆ.ಹರೀಶ್, ಸಂಘಟನಾ ಕಾರ್ಯದರ್ಶಿ ಕೆ. ಕನೀಷ್ ಕುಮಾರ್, ಕೆ.ಪಿ. ವಿನೋದ್, ಭಾಸ್ಕರನ್, ಪಿ.ಸಿ.ಸುರೇಶ್, ಶೋಬಾ, ಅಕ್ಷತಾ, ಸುಜಿತಾ, ಚಂದ್ರಿಕಾ, ರಂಜಿನಿ, ಗೀತಾದೇವಿ, ಕವಿತಾ,ಪ್ರಭಾಕರ್ ಹಾಗೂ ಇತರರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ಕೇರಳದ ಚಂಡೆಯೊಂದಿಗೆ ಮಾವೆಲಿ ವೇಷಧಾರಿಯೊಂದಿಗೆ ಮಲಯಾಳಿ ಬಾಂಧವರು ಮೆರವಣಿಗೆಯಲ್ಲಿ ಶ್ರೀ ರಾಮ ಮಂದಿರದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಗದ್ದೆಹಳ್ಳದ ಎಸ್ಎಸ್ ಇಂಟರ್ ನ್ಯಾಷನಲ್ ಸಂಬಾಗಣದಲ್ಲಿ ಸಂಗಮಗೊಂಡರು.