Kodagu

ಅ.4ರಂದು ಮಡಿಕೇರಿಯಲ್ಲಿ ವಿಜೃಂಭಣೆಯ ಓಣಂ ಆಚರಣೆ

admincoorgdaily

ಅ.4ರಂದು ಮಡಿಕೇರಿಯಲ್ಲಿ  ವಿಜೃಂಭಣೆಯ ಓಣಂ ಆಚರಣೆ
ಮಡಿಕೇರಿ: ಮಡಿಕೇರಿಯ ಕ್ರಿಸ್ಟಲ್ ಕೋರ್ಟ್‌ನಲ್ಲಿ ಅ.೪ರಂದು ೧೮ಕ್ಕೂ ಹೆಚ್ಚು ಬಗೆಯ ಖಾದ್ಯಗಳೊಂದಿಗೆ ಓಣಂ ಸದ್ಯ ಸಿದ್ಧವಾಗಲಿದೆ ಎಂದು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್.ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ೯ಕ್ಕೆ ಚೌಡೇಶ್ವರಿ ದೇವಸ್ಥಾನದಿಂದ ಮೆರವಣಿಗೆ, ೧೧ಕ್ಕೆ ತಿರುವಾದಿರ ನೃತ್ಯದೊಂದಿಗೆ ಸಭೆ ಆರಂಭವಾಗಲಿದೆ. ಸಾಧಕರಿಗೆ ಸನ್ಮಾನ, ಬಳಿಕ ಓಣಂ ಸದ್ಯ ಇರಲಿದೆ. ೧.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕೇರಳದ ಸ್ಯಾನ್ ಕ್ರಿಯೇಷನ್ಸ್ ಕಾಮಿಡಿ ಶೋ ಆಕರ್ಷಣೆಯಾಗಲಿದೆ ಎಂದರು.

ಬಸವಪಟ್ಟಣದ ತೋಟಂ ದಾರ್ಯ ಮಠದ ಶಿವಯೋಗಿ ಸ್ವಾಮೀಜಿ ಉದ್ಘಾಟಿಸಲಿದ್ದು, ಶಾಸಕ ಮಂತರ್ ಗೌಡ, ಕೆ.ಪಿ.ಬೋಜಯ್ಯ, ವಿ.ಎಂ.ವಿಜಯ, ರಾಜೇಶ್ ಯಲ್ಲಪ್ಪ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ. 
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಅನಿಲ್, ಪ್ರಮೋದ್, ಸಂದೀಪ್, ದಿನೇಶ್, ಮೋಹನ್ ಇದ್ದರು.