Kodagu

2028ಕ್ಕೆ ನಮ್ಮದೇ ಸರ್ಕಾರ: ಕಾರ್ಯಕರ್ತರಿಗೆ ಎಚ್.ಡಿ ಕುಮಾರಸ್ವಾಮಿ ಧೈರ್ಯ

admincoorgdaily

2028ಕ್ಕೆ ನಮ್ಮದೇ ಸರ್ಕಾರ: ಕಾರ್ಯಕರ್ತರಿಗೆ ಎಚ್.ಡಿ  ಕುಮಾರಸ್ವಾಮಿ ಧೈರ್ಯ
ಸೋಮವಾರಪೇಟೆ:2028ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮದೇ ಸರ್ಕಾರ ಬರಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಸೋಮವಾರಪೇಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಎದೆಗುಂದಬೇಡಿ. ಪಕ್ಷ ಸಂಘಟನೆಗೆ ಈಗಿನಿಂದಲೇ ಕೆಲಸ ಆರಂಭಿಸಿ. ಪ್ರತಿ ಹಳ್ಳಿ, ಪ್ರತಿ ಬೂತ್‌ನಲ್ಲಿ ಪಕ್ಷವನ್ನು ಬಲಪಡಿಸಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು ಕರೆ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಜೆಡಿಎಸ್‌ಗೆ ಬಲವಾದ ಬೇರು ಇದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯೇ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಆದ್ದರಿಂದ ಸ್ಥಳೀಯ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಈಗಿನಿಂದಲೇ ಶ್ರಮಿಸಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್, ನೂತನ ಜಿಲ್ಲಾಧ್ಯಕ್ಷ ಸೋಮವಾರಪೇಟೆಯ ಪ್ರವೀಣ್. ಜೆಡಿಎಸ್ ಕೊಡಗು ಜಿಲ್ಲಾ  ಕಾರ್ಯಧ್ಯಕ್ಷ ಸಿಎಲ್ ವಿಶ್ವ  ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.