Kodagu

ಗಾಂಧಿ, ಶಾಸ್ತ್ರಿ ಅವರ ಒಂದು ತತ್ವವನ್ನಾದರೂ ಅಳವಡಿಸಿಕೊಳ್ಳಲು ಪದ್ಮ ಕರೆ

admincoorgdaily

ಗಾಂಧಿ, ಶಾಸ್ತ್ರಿ ಅವರ ಒಂದು ತತ್ವವನ್ನಾದರೂ ಅಳವಡಿಸಿಕೊಳ್ಳಲು ಪದ್ಮ ಕರೆ


ವಿರಾಜಪೇಟೆ;ಮಹಾತ್ಮ ಗಾಂಧೀಜಿ  ಹಾಗೂ  ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಕೇವಲ ಜಯಂತಿಯ ದಿನದಂದು ನೆನೆದರೆ ಸಾಲದು ಅವರ ತತ್ವ ವಿಚಾರಗಳನ್ನು ಅರ್ಥೈಸಿ ಅಳವಡಿಸಿಕೊಳ್ಳುವ ಕಾರ್ಯವಾದಾಗ ಅವರ ಜಯಂತಿ ಆಚರಣೆ ಅರ್ಥಪೂರ್ಣ ವಾಗುತ್ತದೆ ಎಂದು ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ. ಕೆ. ಪದ್ಮ  ಸಲಹೆ ನೀಡಿದರು.

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಶುಕ್ರವಾರ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಗಳ  ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಗಾಂಧೀಜಿಯ ಹಾಗೂ  ಶಾಸ್ತ್ರಿಯವರ ವಿಚಾರ ಧಾರೆ ಹಾಗೂ ಮಹತ್ವವನ್ನು ಈ ದಿನ‌ ಅರಿತು ಕೊಳ್ಳುತ್ತೇವೆ . ಅವರ ಒಂದೊಂದು ತತ್ವಗಳನ್ನು ನಾವು ಅಳವಡಿಸಿಕೊಡರೆ
  ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳ ಬಹುದು. ಬಾಹ್ಯ ಸ್ವಚ್ಚತೆಯೊಂದಿಗೆ ಪ್ರತಿಯೊಬ್ಬರು ತಮ್ಮ ಆಂತರ್ಯವನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸಮಾನತೆಯಿಂದ ಆ ಮಹನೀಯರು ಕಂಡ ಸಡೃದ ಭಿರತ ನಿರ್ಮಾಣ ಮಾಡೋಣ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ. ಜಿ. ವೀಣಾ ಗಾಂಧೀಜಿಯವರ ಅಹಿಂಸೆ , ಗ್ರಾಮ ಸ್ವರಾಜ್ಯ  ,  ಸಮಾನತೆ , ಗುಡಿ ಕೈಗಾರಿಕೆಯ ಅಭಿವೃಧ್ದಿ  ಪ್ರಸ್ತುತ ಸಮಾಜಕ್ಕೆ ಬಹಳ ಮುಖ್ಯ ವಾದದ್ದು . ಅದೇ ರೀತಿ  ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಸರಳ ಜೀವನ ಅಪ್ರತಿಮ ದೇಶಭಕ್ತಿಯನ್ನು ಪ್ರತಿಯೊಬ್ಬರು ರಿತು ನಮ್ಮಲ್ಲು ಆ ಇಬ್ಬರು ಮಹಾತ್ಮರ ಕೆಲವು ಗುಣಗಳನ್ನಾದರು ನಾವು ಅಳವಡಿಸಿಕೊಂಡರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ  ಎಂದರು.


ಕಾಲೇಜಿನ  ಎನ್ ಎಸ್ ಎಸ್ ಹಾಗೂ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಕಾಲೇಜಿನ ಆವರಣ ಹಾಗೂ  ಮುಂಭಾಗ ಹೆದ್ದಾರಿಯ ಕಸವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಎಲ್ ಆರ್ ರಾಘವೇಂದ್ರ,  ಎನ್.ಎಸ್.ಎಸ್ ಯೋಜನಾಧಿಕಾರಿ ಬಿ.ಬಿ. ಸುನಿಲ್ ಕುಮಾರ್ , ಎನ್.ಸಿ.ಸಿ ಅಧಿಕಾರಿ ಲೆ.ಬಿ.ಬಿ.ಬೋಜಮ್ಮ, ಉಪನ್ಯಾಸಕರಾದ ಅಕ್ಷಿತಾ ನಾಯ್ಕ್, ಮಾಣಿಕ್ಯ , ಪವಿತ್ರ , ಬಾಬು , ದಮಯಂತಿ , ಅನುಪಮ ಆಡಳಿತಾತ್ಮಕ ಸಿಬ್ಬಂದಿಗಳಾದ ಸೋಮನಾಥ್,  ಹರೀಶ್ , ಸಿಂಧು , ದಿನೇಶ್ , ಶಶಿಕಲಾ , ಜಯಮ್ಮ ಇದ್ದರು.