Kodagu

ಕೊಡಗು ಜಿಲ್ಲಾ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷರಾಗಿ ಪಟ್ಟಡ ರಂಜಿ ಪೂಣಚ್ಚ, ಕಾರ್ಯಾಧ್ಯಕ್ಷರಾಗಿ ಪುದಿಯನೆರವನ ವಿಜು ಉತ್ತಪ್ಪ ಆಯ್ಕೆ

admincoorgdaily

ಕೊಡಗು ಜಿಲ್ಲಾ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷರಾಗಿ  ಪಟ್ಟಡ ರಂಜಿ ಪೂಣಚ್ಚ, ಕಾರ್ಯಾಧ್ಯಕ್ಷರಾಗಿ  ಪುದಿಯನೆರವನ ವಿಜು ಉತ್ತಪ್ಪ ಆಯ್ಕೆ
ಸಿದ್ದಾಪುರ-: ಮುಂಬರುವ ಅಷ್ಟಮಿ-ರೋಹಿಣಿ ದಿನದಂದು ವಿಶ್ವದಾದ್ಯಂತ ಜಾತಿ-ಧರ್ಮ-ಭೇದ ಇಲ್ಲದೆ ಆಚರಿಸಲ್ಪಡುತಿರುವ ಶ್ರೀ ಕೃಷ್ಣ ಜಯಂತಿಯನ್ನು ಕೊಡಗು ಜಿಲ್ಲಾ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ವತಿಯಿಂದ ವಿರಾಜಪೇಟೆ ತಾಲೂಕಿನ ಸಿದ್ದಾಪುರ ನಗರದಲ್ಲಿ ಸರ್ವರ ಸಹಕಾರದೊಂದಿಗೆ ಬಹಳ ಅದ್ದೂರಿಯಿಂದ ಆಚರಿಸಲು ನಿರ್ಧಾರಿಸಲಾಗಿದ್ದು, 

ಸಮಿತಿಯ ನೂತನ ಗೌರವಾಧ್ಯಕ್ಷರಾಗಿ ವಿರಾಜಪೇಟೆಯ ಸಮಾಜಸೇವಕರಾದ ಶ್ರೀ ಪಟ್ಟಡ ರಂಜಿ ಪೂಣಚ್ಚ ಹಾಗೂ ಕಾರ್ಯಾಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಪುದಿಯನೆರವನ ವಿಜು ಉತ್ತಪ್ಪನವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಪ್ರವೀಣ್ ಸಿದ್ದಾಪುರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.