Kodagu

ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಕಾರ್ಯವೈಖರಿಗೆ ಜನರ ಮೆಚ್ಚುಗೆ: 54% ಮಂದಿ 'ಅತ್ಯುತ್ತಮ' ಎಂದರು!

admincoorgdaily

ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಕಾರ್ಯವೈಖರಿಗೆ ಜನರ ಮೆಚ್ಚುಗೆ: 54% ಮಂದಿ 'ಅತ್ಯುತ್ತಮ' ಎಂದರು!
ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಕಳೆದ 3 ವರ್ಷಗಳ ಕಾರ್ಯವೈಖರಿ ಹೇಗಿದೆ? ಎಂಬ ಕುರಿತು ಕೂರ್ಗ್ ಡೈಲಿ ನಡೆಸಿದ್ದ ರೀಡರ್ ಪೋಲ್ ಫಲಿತಾಂಶ ಪ್ರಕಟಗೊಂಡಿದೆ.
ಈ ಸಮೀಕ್ಷೆಯಲ್ಲಿ ಬಹುತೇಕ ಜನರು ಶಾಸಕರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ ಹೀಗಿದೆ:

- ಅತ್ಯುತ್ತಮ - ನಿರೀಕ್ಷೆಗಿಂತ ಚೆನ್ನಾಗಿ ಕೆಲಸ ಮಾಡಿದ್ದಾರೆ (10/10 - ಸೂಪರ್, ಮತ್ತೆ ಗೆಲ್ಲಬೇಕು): 54%

- ಪರವಾಗಿಲ್ಲ - ಸ್ವಲ್ಪ ಕೆಲಸ ಆಗಿದೆ, ಇನ್ನೂ ಬೇಕಿತ್ತು: 23%

- ನಿರಾಶಾದಾಯಕ - ಹೇಳಿದಷ್ಟು ಕೆಲಸ ಆಗಿಲ್ಲ: 23%

ಒಟ್ಟಾರೆ ಶೇ.54 ರಷ್ಟು ಓದುಗರು ಶಾಸಕ ಡಾ.ಮಂತರ್ ಗೌಡ ಅವರ ಕಾರ್ಯವೈಖರಿಯನ್ನು ಅತ್ಯುತ್ತಮ ಎಂದು ಅಭಿಪ್ರಾಯಪಟ್ಟಿದ್ದು, ಮತ್ತೆ ಗೆಲ್ಲಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.