National News

ಅಣ್ಣಾವ್ರ ನಂತರ 30 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಒಲಿದ ಫಾಲ್ಕೆ:ಹಿರಿಯ ನಟ ಅನಂತ್ ನಾಗ್ ಗೆ ಅತ್ಯುನ್ನತ ಗೌರವ

admincoorgdaily

ಅಣ್ಣಾವ್ರ ನಂತರ 30 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಒಲಿದ ಫಾಲ್ಕೆ:ಹಿರಿಯ ನಟ ಅನಂತ್ ನಾಗ್ ಗೆ ಅತ್ಯುನ್ನತ ಗೌರವ
ಬೆಂಗಳೂರು: ಮಾಲ್ಗುಡಿ ಡೇಸ್ ನ ಮುಗ್ಧ ಸ್ವಾಮಿಯಾಗಿ, ಬಯಲುದಾರಿಯ ಕನಸುಗಾರನಾಗಿ, ಗಣೇಶನ ಮದುವೆಯ ಸಂಭ್ರಮದ ನಾಯಕನಾಗಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ವೃದ್ಧನಾಗಿ - ನಾಲ್ಕು ದಶಕಗಳ ಕಾಲ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದ ಅಭಿನಯದ ವಿಶ್ವಕೋಶ ಅನಂತ್ ನಾಗ್ ಅವರಿಗೆ ಕೊನೆಗೂ ರಾಷ್ಟ್ರದ ಅತ್ಯುನ್ನತ ಸಿನಿ ಗೌರವ ಒಲಿದಿದೆ.

ಭಾರತೀಯ ಚಿತ್ರರಂಗಕ್ಕೆ ನೀಡಿದ ಜೀವಮಾನದ ಕೊಡುಗೆಗಾಗಿ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹಿರಿಯ ನಟ ಅನಂತ್ ನಾಗ್ ಆಯ್ಕೆಯಾಗಿದ್ದಾರೆ. ಈ ಮೂಲಕ 1995ರಲ್ಲಿ ಡಾ.ರಾಜ್ ಕುಮಾರ್ ಅವರ ಬಳಿಕ ಈ ಪ್ರಶಸ್ತಿಗೆ ಭಾಜನರಾಗುತ್ತಿರುವ ಕನ್ನಡದ ಎರಡನೇ ನಟ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಸೆಪ್ಟೆಂಬರ್ 22ರಂದು ಗುಜರಾತ್ ನ ಏಕ್ತಾ ನಗರದಲ್ಲಿ ನಡೆಯುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನು ಅವರಿಗೆ ಪ್ರದಾನ ಮಾಡಲಾಗುತ್ತದೆ.