Kodagu

ಕೊಡಗು ಔಷಧಿ ವ್ಯಾಪಾರಸ್ಥರ ಸಂಘದಿಂದ ಔಷಧಿ ತಜ್ಞರ ದಿನಾಚರಣೆ; ರಕ್ತದಾನ ಶಿಬಿರ

admincoorgdaily

ಕೊಡಗು ಔಷಧಿ ವ್ಯಾಪಾರಸ್ಥರ ಸಂಘದಿಂದ ಔಷಧಿ ತಜ್ಞರ ದಿನಾಚರಣೆ; ರಕ್ತದಾನ ಶಿಬಿರ
ಮಡಿಕೇರಿ; ಬದಲಾಗುತ್ತಿರುವ  ಕಾನೂನು ಕಾಯಿದೆಗಳನ್ನು ಗಮನದಲ್ಲಿರಿಸಿಕೊಂಡು ಪ್ರತೀಯೋವ೯ ಔಷಧಿ ವ್ಯಾಪಾರಿಯೂ ಪಾರದಶ೯ಕವಾಗಿ ವ್ಯವಹರಿಸಿ ಗ್ರಾಹಕರಿಗೆ ಸೇವಾ ಮನೋಭಾವದಿಂದ ಔಷಧಿಗಳನ್ನು ನೀಡಬೇಕೆಂದು ಕೊಡಗು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯ  ಅಂಕಿತ ಅಧಿಕಾರಿ   ಡಾ. ಅನಿಲ್ ಧಾವನ್ ಕರೆ ನೀಡಿದ್ದಾರೆ.  

ನಗರದ  ಫಾಮಾ೯  ಭವನದಲ್ಲಿ ಕೊಡಗು ಔಷಧಿ ವ್ಯಾಪಾರಸ್ಥರ ಸಂಘದಿಂದ ಆಯೋಜಿತವಾಗಿದ್ದ ವಿಶ್ವ ಔಷಧಿ ತಜ್ಞರ   ದಿನಾಚರಣೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಪ್ರತೀಯೋವ೯ ವ್ಯಾಪಾರಸ್ಥರು ಆಹಾರ ಪರವಾನಗಿ ಪಡೆಯಲೇಬೇಕು. ಉತ್ತಮ ಗುಣಮಟ್ಟದ ಆಹಾರ ಮತ್ತು ಔಷಧಿಯನ್ನು ಗ್ರಾಹಕರಿಗೆ ನೀಡವುದು ವ್ಯಾಪಾರಸ್ಥರ ಆದ್ಯತೆಯಾಗಿದ್ದು ಈ ಸಂಬಧ ಯಾವುದೇ ದೂರು ಬಂದಲ್ಲಿ ಅಂಥ ವ್ಯಾಪಾರಿಗಳ ವಿರುದ್ದ ಕಠಿಣ  ಕಾನೂನು ಕ್ರಮ ಖಂಡಿತಾ  ಎಂದೂ ಅನಿಲ್ ಧಾವನ್ ಎಚ್ಚರಿಸಿದರು.

ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ಲು ಜೀವನ್ ಕುಶಾಲಪ್ಪ ಮಾತನಾಡಿ,  ಸಮಾಜಕ್ಕೆ ಔಷಧಿ ವ್ಯಾಪಾರಸ್ಥರ ಸೇವೆಯನ್ನು ಗುರುತಿಸಿ ಗೌರವಿಸುವ ದಿನವನ್ನು ಎಲ್ಲಾ ಔ|ಷಧಿ ವ್ಯಾಪಾರಸ್ಥರು ಸಂಭ್ರಮದಿಂದ ಆಚರಿಸಿಕೊಳ್ಳುವಂತಾಗಿದೆ. ಕೊಡಗು ಜಿಲ್ಲೆಯಲ್ಲಿ ಸಂಘಕ್ಕೆ ಸ್ವಂತ ಭವನ ನಿಮಾ೯ಣವಾಗಿದ್ದು, ಇಲ್ಲಿ ಮುಂದಿನ ದಿನಗಳಲ್ಲಿ ವಿನೂತನ ಕಾಯ೯ಕ್ರಮಗಳು, ಸಭೆಗಳನ್ನು ಆಯೋಜಿಸುತ್ತಾ ಸಮಾಜಮುಖಿಯಾಗಿ ಸಂಘವನ್ನು ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.  


ಜಿಲ್ಲಾ ಸಹಾಯಕ  ಔಷಧಿ ನಿಯಂತ್ರಕರಾದ ಅಜಯ್ ರಾಜ್ ಷಾ ಮಾತನಾಡಿ, ಔಷಧಿ ಮಾರಾಟದ ಹಲವಾರು ಕಾನೂನುಗಳು ಕೂಡ ಬದಲಾಗುತ್ತಲೇ ಇವೆ. ಇಂಥ ಕಾನೂನು ನಿಯನಗಳ ಬಗ್ಗೆ ಕಾಲಕಾಲಕ್ಕೆ ತಿಳಿಯುವುದು ಔಷಧಿ ವ್ಯಾಪಾರಸ್ಥರ ಕತ೯ವ್ಯವಾಗಿದೆ ಎಂದರಲ್ಲದೇ, ಕಾನೂನು ಪಾಲನೆ ಮಾಡುವ ಮೂಲಕ ಸಕಾ೯ರದ ಕಾನೂನುಗಳನ್ನು ಗೌರವಿಸಿ ಎಂದು ಸೂಚಿಸಿದರು.   ಇದೇ ಮೊದಲ ಬಾರಿಗೆ ಸಕಾ೯ರದ ವತಿಯಿಂದ ಉತ್ತಮ ಔಷಧಿ ತಜ್ಞರನ್ನು ಗುರುತಿಸಿ ಗೌರವಿಸುವ ಯೋಜನೆ ಜಾರಿಯಾಗುತ್ತಿದೆ ಎಂದೂ ಅಜಯ್ ರಾಜ್ ಷಾ ನುಡಿದರು.

 ಕೊಡಗು ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾದಿಕಾರಿ ಡಾ. ಕರುಂಬಯ್ಯ ಮಾತನಾಡಿ, ಪ್ರತೀ ಹನಿ ರಕ್ತವೂ ಮಹತ್ವದ್ದಾಗಿದೆ. ರಕ್ತದಾನಿಗಳಿಂದ ಸಂಗ್ರಹವಾಗುವ ರಕ್ತವು ತುತು೯ ಸಂದಭ೯ಗಳಲ್ಲಿ ಅನೇಕ ಜೀವಗಳನ್ನು ಕಾಪಾಡಲು ಬಳಕೆಯಾಗುತ್ತದೆ. ಹೀಗಾಗಿ ರಕ್ತದಾನದ ಮೂಲಕ ಅಮೂಲ್ಯ ಜೀವಗಳನ್ನು ಸಂರಕ್ಷಿಸುವ ಕಾಯ೯ಕ್ಕೆ ಪ್ರತೀಯೋವ೯ರು ರಕ್ತವನ್ನು ದಾನವಾಗಿ ನೀಡುವುದು ಸೂಕ್ತ ಎಂದು ಹೇಳಿದರು. ಜಿಲ್ಲೆಯಲ್ಲಿ ರಕ್ತದ ಕೊರತೆಯಿದ್ದು, ರಕ್ತದಾನ ಶಿಬಿರಗಳ ಸಂಖ್ಯೆಯನ್ನು ಹೆಚ್ಚಿಸಿ ರಕ್ತವನ್ನು ಸಂಗ್ರಹಿಸುವ ಅನಿವಾಯ೯ತೆಯಿದೆ ಎಂದೂ ಡಾ. ಕರುಂಬಯ್ಯ ಹೇಳಿದರು.  

 ಕೊಡಗು ಔಷಧಿ ವ್ಯಾಪಾರಸ್ಥರ  ಸಂಘದ   ಖಜಾಂಜಿ ಪ್ರಸಾದ್ ಗೌಡ ಅತಿಥಿ ಪರಿಚಯ ಮಾಡಿ, ಜಂಟಿ ಕಾಯ೯ದಶಿ೯ ವಸಂತ್  ಕುಮಾರ್ ನಿರೂಪಿಸಿದ ಕಾಯ೯ಕ್ರಮದಲ್ಲಿ ರಮ್ಯ ಪ್ರಸಾದ್ ಪ್ರಾಥಿ೯ಸಿದರು. ಸಂಘದ ಪ್ರಧಾನ ಕಾಯ೯ದಶಿ೯ ಡಿ.ಟಿ. ಪುರುಷೋತ್ತಮ್ ವೇದಿಕೆಯಲ್ಲಿದ್ದರು.

ಈ ಸಂದಭ೯ ಔಷಧಿ ವ್ಯಾಪಾರಸ್ಥರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಶಿಬಿರದಲ್ಲಿ 23  ಯೂನಿಟ್ ಗಳಷ್ಟು ರಕ್ತ ಸಂಗ್ರಹವಾಯಿತು. ಕಾಯ೯ಕ್ರಮದಲ್ಲಿ ಸಂಘದ ನಿದೇ೯ಶಕರಾದ ಎ.ಕೆ. ವಿನೋದ್,  ಪ್ರಸಾದ್ ,ಚಂದ್ರಶೇಖರ್, ಕಿರಣ್ ಕುಂದರ್, ಧನಂಜಯ್ ಶಾಸ್ತ್ರಿ, ಗೌತಮ್ ಪ್ರಸಾದ್,  ವಿವೇಕ್, , ಹಾಗೂ . ಕೊಡಗಿನ ಹಲವಾರು ಕಡೆಗಳಿಂದ ಬಂದಿದ್ದ ಔಷಧಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.  

ಸಾಧಕ ಔಷಧಿ ವ್ಯಾಪಾರಿಗೆ ಗೌರವ;

ಈ ವಷ೯ದಿಂದ ರಾಜ್ಯ ಸಕಾ೯ರವು ಔಷಧಿ ವ್ಯಾಪಾರಸ್ಥರ ದಿನದಂದು ಆಯಾ ಜಿಲ್ಲೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಔಷಧಿ ವ್ಯಾಪಾರಸ್ಥರಿಗೆ ಗೌರವ ಸನ್ಮಾನ ನೆರವೇರಿಸುತ್ತಿದೆ. ಈ ಬಾರಿ ವೀರಾಜಪೇಟೆಯ  ಶ್ರೀಗಣೇಶ ಮೆಡಿಕಲ್ಸ್ ನ  ಎಂ.ಸುದಶ೯ನ್ ರೈ ಈ ಗೌರವಕ್ಕೆ ಭಾಜನರಾಗಿದ್ದು  ಸುಧಶ೯ನ್ ರೈ ಮತ್ತು ಪತ್ನಿ ವಿಜಯಲಕ್ಷ್ಮಿ ರೈ ಅವರನ್ನು ಕಾಯ೯ಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.