ಪೊನ್ನಂಪೇಟೆ: ಅಂಬೇಡ್ಕರ್ ನಿಗಮದ ವಾಹನ ಖರೀದಿ ಅನುದಾನ - ಕುಟ್ಟದ ಷಣ್ಮುಗ ಅವರಿಗೆ ವಾಹನ ಕೀ ಹಸ್ತಾಂತರ
admincoorgdaily

ವಿರಾಜಪೇಟೆ: ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಶಿಫಾರಸ್ಸಿನ ಮೇರೆಗೆ, ಅಂಬೇಡ್ಕರ್ ನಿಗಮದ ವತಿಯಿಂದ ಫಲಾನುಭವಿಗಳಿಗೆ ನೀಡುವ ವಾಹನ ಖರೀದಿ ಅನುದಾನದಲ್ಲಿ ಪೊನ್ನಂಪೇಟೆ ತಾಲೂಕು ಕುಟ್ಟ ಗ್ರಾಮದ ನಿವಾಸಿ ಶ್ರೀ ಷಣ್ಮುಗ ರವರಿಗೆ ನೀಡಲಾದ ಹೊಸ ವಾಹನದ ಕೀಯನ್ನು ಹಸ್ತಾಂತರಿಸಲಾಯಿತು.
ಶಾಸಕರ ಹುದುಕೇರಿ ನಿವಾಸದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ, ಫಲಾನುಭವಿಗಳಿಗೆ ಕೀಯನ್ನು ಸ್ವತಹ ಹಸ್ತಾಂತರಿಸಿ, ವಾಹನವನ್ನು ಚಲಾಯಿಸುವ ಮೂಲಕ ಮಾನ್ಯ ಶಾಸಕರು ಶುಭ ಕೋರಿದರು.
ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರಾಮಕೃಷ್ಣ, ಕುಟ್ಟ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಾರ್ದಿನ್, ಪೂಣಚ್ಚ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಆಲೀರ ರಶೀದ್, ಹಾತುರು ವಲಯ ಅಧ್ಯಕ್ಷರಾದ ಕೊಕ್ಕಂಡ ರೋಷನ್, ಪಕ್ಷದ ಮುಖಂಡರಾದ ಅಣ್ಣಳ್ಳಮಾಡ ಹರೀಶ್ ಪೂವಯ್ಯ, ಅಜ್ಜಿಕುಟ್ಟಿರ ಪಮ್ಮು, ಮಧುಸೂದನ್, ಶೇಖರ್, ಸುರೇಶ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.