ಚೇರಂಬಾಣೆಯ ಅರುಣ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆ: ಗಂಗಾ ತಂಡಕ್ಕೆ ಪ್ರಥಮ ಸ್ಥಾನ
admincoorgdaily

ನಾಪೋಕ್ಲು :ಚೇರಂಬಾಣೆಯ ಅರುಣ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಮೂರು ತಂಡಗಳ ನಡುವೆ ನಡೆದ ಪೂಕಳಂ ಸ್ಪರ್ಧೆ ಅತ್ಯಾಕರ್ಷಕವಾಗಿತ್ತು. ಕಾವೇರಿ, ಗಂಗಾ ಮತ್ತು ಯಮುನಾ ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಗಂಗಾ ತಂಡ ಪ್ರಥಮ ಸ್ಥಾನ ಗಳಿಸಿತು. ಕಾವೇರಿ ತಂಡ ದ್ವಿತೀಯ ಸ್ಥಾನಕ್ಕೆ ಭಾಜನವಾದರೆ ಯಮುನಾ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು.
ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸಲು ಮನೆಯ ಮುಂದೆ ಹೂಗಳಿಂದ ವೃತ್ತಾಕಾರದ ವಿನ್ಯಾಸ ಮಾಡುವ ಪೂಕಳಂಗೆ ಶಾಲೆಯಲ್ಲಿ ಮಹತ್ವ ನೀಡಲಾಗಿತ್ತು.ಓಣಂ ಕೇರಳದ ದೊಡ್ಡ ಹಬ್ಬವಾಗಿದ್ದು ಹತ್ತು ದಿನಗಳ ಕಾಲ ವಿವಿಧ ರೀತಿಯ ಹೂವಿನ ರಂಗೋಲಿಯನ್ನು ರಚಿಸಿ ಹಬ್ಬಕ್ಕೆ ಕಳೆ ತುಂಬುತ್ತಾರೆ.ಕೊಡಗಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಮಲೆಯಾಳಿ ಜನಾಂಗ ಓಣಂ ಹಬ್ಬವನ್ನು ಅದ್ಧೂರಿಯಿಂದ ಆಚರಿಸುತ್ತಾರೆ.ತುಂಬೆ ಹೂ, ಚೆಂಡುಹೂ, ಮಲ್ಲಿಗೆ, ಕಾಕಡ,ಕನಕಾಂಬರ,ಆಕರ್ಷಕ ಎಲೆಗಳು ಸೇರಿದಂತೆ ಬಗೆಬಗೆಯ ಹೂಗಳಿಂದ ಪೂಕಳಂ ರಚಿಸಲಾಗಿತ್ತು. ಹಳದಿ,ಕೇಸರಿ ,ಬಿಳಿ ಬಣ್ಣಗಳಿಗೆ ಪ್ರಶಸ್ತಿ ನೀಡಲಾಗಿತ್ತು. ನವಿಲು,ದೋಣಿ ,ಮಹಾಬಲಿ ಮುಖದ ವಿನ್ಯಾಸಗಳೊಂದಿಗೆ ಹಾಗೂ ತಂಡದ ಹೆಸರುಗಳನ್ನು ಕೂಡ ಪುಷ್ಪಗಳಿಂದ ರಚಿಸಿ ವೀಕ್ಷಕರ ಗಮನ ಸೆಳೆಯುವಂತೆ ಮಾಡಲಾಗಿತ್ತು.