ಗಣಪತಿ ಬೀದಿಯಲ್ಲಿ ರಸ್ತೆ ಗುಂಡಿಗಳ ದುರಸ್ತಿ ಕಾರ್ಯ: ಕಾಮಗಾರಿ ಪರಿಶೀಲಿಸಿದ ಮಾಜಿ ನಗರಸಭಾ ಸದಸ್ಯ ಅಮೀನ್ ಮೊಹ್ಸಿನ್
admincoorgdaily

ಮಡಿಕೇರಿ: ನಗರದ ಗಣಪತಿ ಬೀದಿಯಲ್ಲಿ ಹಲವು ದಿನಗಳಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದು, ದೊಡ್ಡ ಹೊಂಡಗಳಾಗಿ ಪರಿಣಮಿಸಿದ್ದರಿಂದ ಸಾರ್ವಜನಿಕರು, ಪಾದಚಾರಿಗಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾರ್ಯ (ಪ್ಯಾಚ್‌ವರ್ಕ್) ಕೈಗೊಳ್ಳಲಾಗಿದ್ದು, ನಗರಸಭಾ ಮಾಜಿ ಸದಸ್ಯ ಅಮೀನ್ ಮೊಹ್ಸಿನ್ ಅವರು ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ರಸ್ತೆಯಲ್ಲಿದ್ದ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವುದರ ಜೊತೆಗೆ ಪಾದಚಾರಿಗಳಿಗೂ ಅಪಾಯ ಎದುರಾಗಿತ್ತು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ಕಾಮಗಾರಿಯ ಗುಣಮಟ್ಟ ಹಾಗೂ ಕೆಲಸದ ಪ್ರಗತಿಯನ್ನು ಅಮೀನ್ ಮೊಹ್ಸಿನ್ ಅವರು ಪರಿಶೀಲಿಸಿದರು.