Kodagu

ನ.06 ರಂದು ವಿದ್ಯುತ್ ವ್ಯತ್ಯಯ

admincoorgdaily

ನ.06 ರಂದು ವಿದ್ಯುತ್ ವ್ಯತ್ಯಯ
ಮಡಿಕೇರಿ :-ಕುಶಾಲನಗರ ಉಪವಿಭಾಗದ ಕೂಡಿಗೆ ಶಾಖಾ ವ್ಯಾಪ್ತಿಯ 220/66/11 ಕೆವಿ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ನವೆಂಬರ್, 06 ರಂದು ಬೆಳಗ್ಗೆ 10 ರಿಂದ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಫ್12 ಭುವನಗಿರಿ-ಮಲ್ಲೇನಹಳ್ಳಿ, ಹುದುಗೂರು, ಭುವನಗಿರಿ, ಎಫ್6 ಕೂಡಿಗೆ-ಕೂಡಿಗೆ, ಸುಂದರನಗರ, ಎಫ್1  ಹೆಬ್ಬಾಲೆ-ಹೆಬ್ಬಾಲೆ, ಕಣಿವೆ, ಎಫ್2 ಕಾವೇರಿ-ಇಂಡಸ್ಟ್ರಿಯಲ್ ಏರಿಯಾ, ಎಫ್13 ಎಸ್‍ಎಲ್‍ಎನ್-ಎಸ್‍ಎಲ್‍ಎನ್, ಎಫ್11 ಹಾರಂಗಿ-ಹಾರಂಗಿ, ಚಿಕ್ಕತ್ತೂರು, ದೊಡ್ಡತ್ತೂರು, ಎಫ್8 ಸೋಮೇಶ್ವರ-ಗುಮ್ಮನಕೊಲ್ಲಿ, ಮುಳ್ಳುಸೋಗೆ, ಸಾಯಿ ಲೇಔಟ್, ಎಫ್9 ಬಲಮುರಿ-ರಥಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

 ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ. 
ಹಾಗೆಯೇ ಗೋಣಿಕೊಪ್ಪ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್5 ಕುಂದ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ನವೆಂಬರ್, 06 ರಂದು ಬೆಳಗ್ಗೆ 9.30 ರಿಂದ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹಳ್ಳಿಗಟ್ಟು, ಕುಂದ, ಈಚೂರು, ಕೊಳತೋಡು-ಬೈಗೋಡು, ಹಾತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.