ಅ.14 ರಂದು ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ:-ಸೋಮವಾರಪೇಟೆ ಉಪವಿಭಾಗದ ಶಾಂತಳ್ಳಿ ಶಾಖಾ ವ್ಯಾಪ್ತಿಯ ಎಫ್1 ದೊಡ್ಡಮಳ್ತೆ ಫೀಡರ್ ಮಾರ್ಗದಲ್ಲಿ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ಅಕ್ಟೋಬರ್, 14 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ದೊಡ್ಡಮಳ್ತೆ, ಕಾಗಡಿಕಟ್ಟೆ, ಕೂಗೇಕೊಡಿ, ಗೆಜ್ಜೆಹಣಕೋಡು, ದೊಡ್ಡಹಣಕೋಡು, ಚಿಕ್ಕತೋಳೂರು, ಕಿಬ್ಬೆಟ್ಟ, ಕಾಡುಮನೆ, ಕುವೆಂಪು ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಹಾಗೆಯೇ ಸೋಮವಾರಪೇಟೆ ಉಪವಿಭಾಗದ ಶನಿವಾರಸಂತೆ ಶಾಖಾ ವ್ಯಾಪ್ತಿಯ ಎಫ್6 ಮಂಜೂರು ಫೀಡರ್ ಮಾರ್ಗದಲ್ಲಿ ಟೌನ್ ಫೀಡರ್ ಎಕ್ಸ್‍ಟೆನ್ಸನ್ ಕಾಮಗಾರಿ ನಡೆಸಬೇಕಿರುವುದರಿಂದ ಅಕ್ಟೋಬರ್, 14 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಶೆಟ್ಟಿಗನಹಳ್ಳಿ, ಅಪ್ಪಶೆಟ್ಟಳ್ಳಿ, ಚಿನ್ನಳ್ಳಿ, ಈಚಲಬೀಡು, ಹೊಸೂರು, ಮಂಜೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.