ಅ.16 ರಂದು ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ:-ಗೋಣಿಕೊಪ್ಪ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್7 ಅರುವತ್ತೋಕ್ಲು, ಎಫ್8 ಗೋಣಿಕೊಪ್ಪಲು ಫೀಡರ್ನಲ್ಲಿ ದಸರಾ ಹಬ್ಬದ ಪ್ರಯುಕ್ತ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ಅಕ್ಟೋಬರ್, 16 ರಂದು ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಗಣಪತಿನಗರ, ಜೋಡುಬೆಟ್ಟ, ಕಾಫಿ ಬೋರ್ಡ್, ಗೋಣಿಕೊಪ್ಪಲು ಟೌನ್, ಹರಿಶ್ಚಂದ್ರಪುರ, ಕೈಕೇರಿ, ಅರುವತ್ತೋಕ್ಲು, ಮೈಸೂರಮ್ಮನಗರ, ನೇತಾಜಿ ಬಡಾವಣೆ, ಲೋಪಮುದ್ರ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.