ಸೆ.08 ರಂದು ವಿದ್ಯುತ್ ವ್ಯತ್ಯಯ
admincoorgdaily
ಮಡಿಕೇರಿ ಸೆ.07:-66/33 ಕೆ.ವಿ.ಆಲೂರು ಸಿದ್ಧಾಪುರ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ಸೆಪ್ಟೆಂಬರ್, 08 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಆಲೂರು ಸಿದ್ಧಾಪುರ, ಗೋಣಿಮರೂರು, ಗಣಗೂರು, ಆಲೂರು, ಹಿತ್ಲುಗದ್ದೆ, ದೊಡ್ಡಳ್ಳಿ, ಸಿದ್ಧಲಿಂಗಪುರ, ಮಾಲಂಬಿ, ಹೊಸಗದ್ದೆ, ಕೈಸರವಳ್ಳಿ, ಸುಳುಗೋಡು, ಸೋಮವಾರಪೇಟೆ, ಸಿ.ಅಬ್ಬೂರು ಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ರಾಮಚಂದ್ರ ಅವರು ಕೋರಿದ್ದಾರೆ.