Kodagu

ಸೆ.09 ರಂದು ವಿದ್ಯುತ್ ವ್ಯತ್ಯಯ

admincoorgdaily

ಸೆ.09 ರಂದು ವಿದ್ಯುತ್ ವ್ಯತ್ಯಯಮಡಿಕೇರಿ ಸೆ.07:-66/33 ಕೆ.ವಿ. ಶನಿವಾರಸಂತೆ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ಸೆಪ್ಟೆಂಬರ್, 09 ರಂದು ರಂದು ಬೆಳಗ್ಗೆ 10 ರಿಂದ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, 

ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಶನಿವಾರಸಂತೆ ಶಾಖೆಯ ಗುಡುಗಳಲೆ, ಶನಿವಾರಸಂತೆ ಪಟ್ಟಣ, ಕೆ.ಆರ್.ಸಿ. ಸರ್ಕಲ್, ಅಪ್ಪಶೆಟ್ಟಳ್ಳಿ, ಮಾದ್ರೆ, ಗೌಡಳ್ಳಿ, ಹಿರಿಕರ, ಮುಳ್ಳೂರು, ಗೋಪಾಲಪುರ, ಹಂಡ್ಲಿ, ನಿಡ್ತ, ದುಂಡಳ್ಳಿ, ಶೆಟ್ಟಿಗನ ಹಳ್ಳಿ, ಮೂದ್ರವಳ್ಳಿ ಹಾಗೂ ಕೊಡ್ಲಿಪೇಟೆ ಶಾಖೆಯ ಕೊಡ್ಲಿಪೇಟೆ, ಬೆಸೂರು, ಬ್ಯಾಡಗೊಟ್ಟ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ರಾಮಚಂದ್ರ ಅವರು ಕೋರಿದ್ದಾರೆ.