Kodagu

ಸೆ.09 ರಂದು ವಿದ್ಯುತ್ ವ್ಯತ್ಯಯ

admincoorgdaily

ಸೆ.09 ರಂದು ವಿದ್ಯುತ್ ವ್ಯತ್ಯಯಮಡಿಕೇರಿ:-66/11 ಕೆ.ವಿ ಮಡಿಕೇರಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ಸೆಪ್ಟೆಂಬರ್, 09 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಮಡಿಕೇರಿ ನಗರ, ರಾಜಾಸೀಟ್, ಗದ್ದಿಗೆ, ಕೋಟೆ, ಕುಂಡಾ ಮೇಸ್ತ್ರಿ, ಓಂಕಾರೇಶ್ವರ, ಜಿ.ಟಿ.ರಸ್ತೆ, ಕೆಎಸ್‍ಆರ್‍ಟಿಸಿ, ಮೇಕೇರಿ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಗಾಳಿಬೀಡು, ಮಕ್ಕಂದೂರು, ಹೆಬ್ಬೆಟ್ಟಗೇರಿ, ಕೆ.ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಚೆಟ್ಟಿಮಾನಿ, ಚೇರಂಬಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ರಾಮಚಂದ್ರ ಅವರು ಕೋರಿದ್ದಾರೆ.