Kodagu

ನಾಳೆ ವಿದ್ಯುತ್ ವ್ಯತ್ಯಯ

admincoorgdaily

ನಾಳೆ ವಿದ್ಯುತ್ ವ್ಯತ್ಯಯಮಡಿಕೇರಿ:-ಮಡಿಕೇರಿ 66/11ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ದಸರಾ ಹಬ್ಬದ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ಅಕ್ಟೋಬರ್, 06 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಫ್3 ಗದ್ದಿಗೆ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಸಂಪಿಗೆಕಟ್ಟೆ, ಕನ್ನಂಡಬಾಣೆ, ವಿ.ವಿ. ಶಾಲೆ, ಗದ್ದಿಗೆ, ಉಕ್ಕುಡ, ಆಜಾದ್ ನಗರ, ತ್ಯಾಗರಾಜ್ ಕಾಲೋನಿ, ಅಬ್ಬಿಫಾಲ್ಸ್ ರಸ್ತೆ, ಭಗವತಿ ನಗರ, ಮಲ್ಲಿಕಾರ್ಜುನ ನಗರ, ರಾಣಿಪೇಟೆ, ಮಾರ್ಕೆಟ್ ರಸ್ತೆ, ಮಹದೇವಪೇಟೆ, ಕಾನ್ವೆಂಟ್ ಜಂಕ್ಷನ್, ಕೂರ್ಗ್ ಇಂಟರ್‍ನ್ಯಾಷನಲ್, ಐ.ಟಿ.ಐ. ಹಿಂಭಾಗ, ಕಾವೇರಿ ಲೇಔಟ್, ಟಿ.ಜಾನ್ ಲೇಔಟ್, ಅಬ್ದುಲ್ ಕಲಾಂ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.